ಬೀದರ್:ದಾಖಲೆ ಇಲ್ಲದೆ, ನೋಂದಣಿ ಮಾಡದೆ ದ್ವಿಚಕ್ರ ವಾಹನ ಬಳಕೆ ಮಾಡ್ತಿದ್ದ ಬೈಕ್ ಸವಾರರ ಚಳಿ ಬಿಡಿಸಿದ ಪೊಲೀಸರು 16 ಅಕ್ರಮ ಬೈಕ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಅಕ್ರಮ ಬೈಕ್ ಸವಾರರ ಮೈ ಚಳಿ ಬಿಡಿಸಿದ ಖಾಕಿ ಪಡೆ: 16 ಬೈಕ್ಗಳ ಜಪ್ತಿ...! - ಖಾಕಿ ಪಡೆ
ನೋಂದಣಿ ಮಾಡದೆ ಬಳಕೆ ಮಾಡುತ್ತಿದ್ದ 16 ದ್ವಿಚಕ್ರ ವಾಹನಗಳನ್ನು ಔರಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಕ್ರಮ ಬೈಕ್ ಸವಾರರ ಮೈ ಚಳಿ ಬಿಡಿಸಿದ ಖಾಕಿ ಪಡೆ: 16 ಬೈಕ್ಗಳ ಜಪ್ತಿ...!
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ದಾಖಲೆ ಇಲ್ಲದೆ ಮತ್ತು ಹೊಸ ಬೈಕ್ಗಳು ನೋಂದಣಿ ಮಾಡದೆ ವರ್ಷಗಟ್ಟಲೆ ಸುತ್ತಾಡಿಕೊಂಡು ಸಂಚಾರ ನಿಯಮ ಸಾಮೂಹಿಕ ಉಲ್ಲಂಘನೆ ಮಾಡುತ್ತಿದ್ದ ಹಿನ್ನೆಲೆ ಎಚ್ಚೆತ್ತುಕೊಂಡ ಔರಾದ್ ಸಿಪಿಐ ರಮೇಶ ಮೈಲೂರಕರ್ ಹಾಗೂ ಪಿಎಸ್ ಐ ನಾನಾಗೌಡ ಮಾಲಿ ಪಾಟೀಲ್ ರಸ್ತೆಗಿಳಿದು ಅಕ್ರಮ ಬೈಕ್ಗಳ ತಪಾಸನೆ ನಡೆಸಿದಾಗ 16 ಬೈಕ್ ಗಳು ಅನಧಿಕೃತವಾಗಿ ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಪತ್ತೆ ಹಚ್ಚಿ ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಕುರಿತು ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.