ಬೀದರ್: ವಿಶ್ವ ಜಲ ಸಂರಕ್ಷಣಾ ದಿನದ ಹಿನ್ನೆಲೆಯಲ್ಲಿ ಕೆರೆಗಳಿಗೆ ಮರುಜೀವ ನೀಡಿರುವ ಜಿಲ್ಲೆಯ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ್, ಪ್ರಧಾನಮಂತ್ರಿ ಮೋದಿ ಜೊತೆ ಸಂವಾದ ನಡೆಸಿದರು.
ದೇಶದ ಐದು ಗ್ರಾಮ ಪಂಚಾಯತ್ಗಳ ಪೈಕಿ ಕರ್ನಾಟಕದ ಏಕೈಕ ಗ್ರಾಮ ಪಂಚಾಯತ್ ಅಧ್ಯಕ್ಷಕರಿಗೆ ಆಹ್ವಾನ ಬಂದಿತ್ತು. ಬೀದರ್ ಜಿಲ್ಲೆ ಔರಾದ್ ತಾಲೂಕಿನ ಧೂಪತ್ ಮಹಾಗಾಂವ್ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಪ್ರಧಾನಿ ಮೋದಿ ಜೊತೆ ಸಂವಾದ ನಡೆಸಿದರು. 12ನೇ ಶತಮಾನದ ಗೊಗ್ಗವ್ವೆ ಕೆರೆಗೆ ಮರುಜೀವ ನೀಡಿದ ವಿಷಯದ ಮೇಲೆ ಪ್ರಧಾನಿ ಜೊತೆ ಶ್ರೀನಿವಾಸ್ ಚರ್ಚೆ ನಡೆಸಿದರು. ಜಲ ಸಂರಕ್ಷಣೆ ಬಗ್ಗೆ ಪ್ರಧಾನಿಗೆ ಗ್ರಾಮ ಪಂಚಾಯತ್ ಕೈಗೊಂಡ ಕ್ರಮ ವಹಿಸಿದ ಶ್ರಮದ ಬಗ್ಗೆ ವಿವರಣೆ ನೀಡಿದರು.
ಲಾಕ್ಡೌನ್ ವೇಳೆ ಉದ್ಯೋಗ ಖಾತ್ರಿ ಯೋಜನೆಯಡಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ, 1.5 ಎಕರೆ ವಿಸ್ತೀರ್ಣದ ಕೆರೆಗೆ ಪುನರುಜ್ಜೀವನ ನೀಡಲಾಗಿತ್ತು. ವಾಕಿಂಗ್ ಪಾತ್, ಉದ್ಯಾನ, ಬೋಟಿಂಗ್ ಮೂಲಕ ಈ ಸ್ಥಳವನ್ನ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಹಿನ್ನೆಲೆ ಈ ಗ್ರಾಮ ಪಂಚಾಯತ್ ಸಂವಾದಕ್ಕೆ ಆಯ್ಕೆಯಾಗಿದ್ದು ಊರಿಗೆ ಹೆಮ್ಮೆ ತಂದಿದೆ.