ಕರ್ನಾಟಕ

karnataka

ಗಲಾಟೆಯಿಂದ ಖಟಕ ಚಿಂಚೋಳಿ ಪಿಕೆಪಿಎಸ್ ಚುನಾವಣೆ ಮುಂದೂಡಿದ ಅಧಿಕಾರಿ

By

Published : Feb 3, 2020, 10:33 PM IST

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ (ಪಿಕೆಪಿಎಸ್)​​ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆಯಲ್ಲಿ ಕೆಲವರು ಗಲಾಟೆ ಮಾಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ.

PKPS election postponed in bida
ಗುಂಪು ಚದುರಿಸಿದ ಪೊಲೀಸರು

ಬೀದರ್: ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ (ಪಿಕೆಪಿಎಸ್)​​ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕೆಲವರು ಗಲಾಟೆ ಮಾಡಿದ್ದರಿಂದ ಚುನಾವಣೆ ಮುಂದೂಡಲಾಗಿದೆ.

ಪಿಕೆಪಿಎಸ್ ಅಧ್ಯಕ್ಷ ಸ್ಥಾನದ ಚುನಾವಣೆ ವೇಳೆಯಲ್ಲಿ ಎರಡು ಗುಂಪುಗಳ ಪ್ರತಿಷ್ಠೆಯಿಂದಾಗಿ ನಾಮಪತ್ರ ಸ್ವೀಕರಿಸಿ ಚುನಾವಣೆ ಮಾಡಬೇಕಾದ ಚುನಾವಣಾಧಿಕಾರಿ ಕುಪೇಂದ್ರ ಅವರು ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿರುವುದನ್ನು ಕಂಡು ಚುನಾವಣೆಯನ್ನು ಮುಂದೂಡಿದರು.

ಗಲಾಟೆಯಿಂದಾಗಿ ಖಟಕ ಚಿಂಚೋಳಿ ಪಿಕೆಪಿಎಸ್​ ಚುನಾವಣೆ ಮುಂದೂಡಿಕೆ... ಗುಂಪು ಚದುರಿಸಿದ ಪೊಲೀಸರು

12 ಸದಸ್ಯರನ್ನು ಬಿಟ್ಟು ಅನಗತ್ಯವಾಗಿ ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಅಲ್ಲದೆ ಎರಡು ಬಣದ ಬೆಂಬಲಿಗರು ಗ್ರಾಮದಲ್ಲಿ ಗುಂಪು ಕಟ್ಟಿಕೊಂಡು ಸುತ್ತಾಡುತ್ತಿದ್ದರು. ಪರಿಸ್ಥಿತಿ ವಿಷಮಗೊಳ್ಳುವುದನ್ನು ಅರಿತ ಸ್ಥಳೀಯ ಪೊಲೀಸರು ಜನರನ್ನು ಚದುರಿಸುವಲ್ಲಿ ಯಶಸ್ವಿಯಾದರು.

ABOUT THE AUTHOR

...view details