ಕರ್ನಾಟಕ

karnataka

ETV Bharat / state

ಪರಿವರ್ತನೆಗೆ ಪ್ರೇರಣೆಯಾಗುವ ಶಕ್ತಿ ಫೋಟೋಗ್ರಫಿಗೆ ಇದೆ : ಮಲ್ಲಿಕಾರ್ಜುನ ಖೂಬಾ

ಐತಿಹಾಸಿಕ ಘಟನೆ ನೆನಪಿಸುವ, ಮನಸ್ಸು ಅರಳಿಸುವ ಶಕ್ತಿ ಚಿತ್ರಕ್ಕಿದೆ. ಶ್ರಮ, ತಾಳ್ಮೆ, ಸಹನೆ ಮತ್ತು ಸಮಯ ಪ್ರಜ್ಞೆಯೊಂದಿಗೆ ಕೆಲಸ ಮಾಡುವ ಛಾಯಾಗ್ರಾಹಕರ ಕಾರ್ಯ ಪ್ರಸಂಶನಾರ್ಹ - ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು

ಮಲ್ಲಿಕಾರ್ಜುನ ಖೂಬಾ
ಮಲ್ಲಿಕಾರ್ಜುನ ಖೂಬಾ

By

Published : Aug 19, 2020, 11:48 PM IST

Updated : Aug 20, 2020, 12:22 PM IST

ಬಸವಕಲ್ಯಾಣ: ಹಳೆಯ ನೆನಪುಗಳನ್ನು ನೆನಪಿಸುವ ಜೊತೆಗೆ ಜೀವನದಲ್ಲಿ ಪರಿವರ್ತನೆಗೆ ಪ್ರೇರಣೆಯಾಗುವ ಶಕ್ತಿ ಫೋಟೋಗ್ರಫಿಗೆ ಇದೆ ಎಂದು ಮಾಜಿ ಶಾಸಕ, ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಖೂಬಾ ಹೇಳಿದರು.

ವಿಶ್ವ ಛಾಯಾಗ್ರಹಣ ದಿನಾಚರಣೆ ಸರಳ ಕಾರ್ಯಕ್ರಮ

ತಾಲೂಕು ಫೊಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಅಸೋಸಿಯೇಶನ್​ನಿಂದ ನಗರದ ಯಾತ್ರಿ ನಿವಾಸದಲ್ಲಿ ಆಯೋಜಿಸಿದ ವಿಶ್ವ ಛಾಯಾಗ್ರಹಣ (ಫೊಟೋಗ್ರಫಿ ಡೇ) ದಿನಾಚರಣೆಯ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಫೋಟೊಗ್ರಫಿ ಕುರಿತು ಮಾಹಿತಿ ನೀಡುವ ಕಾರ್ಯಾಗಾರ ಆಗಾಗ ನಡೆಯಬೇಕು. ಫೋಟೋಗ್ರಫಿ ವೃತ್ತಿಯಲ್ಲಿ ಮಹಿಳೆಯರೂ ಆಸಕ್ತಿ ವಹಿಸಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಉದ್ಘಾಟನೆ ನೆರವೇರಿಸಿದ ಗವಿಮಠದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಐತಿಹಾಸಿಕ ಘಟನೆ ನೆನಪಿಸುವ, ಮನಸ್ಸು ಅರಳಿಸುವ ಶಕ್ತಿ ಚಿತ್ರಕ್ಕಿದೆ. ಶ್ರಮ, ತಾಳ್ಮೆ, ಸಹನೆ ಮತ್ತು ಸಮಯ ಪ್ರಜ್ಞೆಯೊಂದಿಗೆ ಕೆಲಸ ಮಾಡುವ ಛಾಯಾಗ್ರಾಹಕರ ಕಾರ್ಯ ಪ್ರಸಂಶನಾರ್ಹ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ, ಬಿಜೆಪಿ ಮುಖಂಡ ವಿಜಯಕುಮಾರ ಮಂಠಾಳೆ, ತಹಶೀಲ್ದಾರ ಸಾವಿತ್ರಿ ಸಲಗರ್, ನಗರಸಭೆ ಪೌರಾಯುಕ್ತ ಗೌತಮ ಕಾಂಬಳೆ, ಸಿಪಿಐ ಜೆ.ಎಸ್.ನ್ಯಾಮಗೌಡರ್, ಅಸೋಸಿಯೇಶನ್​ ತಾಲೂಕು ಅಧ್ಯಕ್ಷ ದಿನೇಶ ಗೊಂಟಲ್ ಉಪಸ್ಥಿತರಿದ್ದರು.

Last Updated : Aug 20, 2020, 12:22 PM IST

ABOUT THE AUTHOR

...view details