ಕರ್ನಾಟಕ

karnataka

ETV Bharat / state

ಕಿಟ್ ವಿತರಣೆ ವೇಳೆ ನೂಕು ನೂಗ್ಗಲು: ಸಾಮಾಜಿಕ ಅಂತರ ಮರೆತ ಜನ - bjp providing food kit

ನಗರದ ನೌಬಾದ್​ನಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಆಯೋಜಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್​ ಚಾಲನೆ ನೀಡಲು ಬಂದಿದ್ದರು. ಈ ವೇಳೆ ಕಿಟ್​ ಪಡೆಯುವ ವೇಳೆ ನೂಕು ನುಗ್ಗಲು ಉಂಟಾಗಿದೆ.

social distnce in bidar
ಕಿಟ್ ವಿತರಣೆ ವೇಳೆ ನೂಕು ನೂಗ್ಗಲು

By

Published : May 8, 2020, 3:02 PM IST

ಬೀದರ್:ಲಾಕ್​ಡೌನ್​ನಿಂದಾಗಿ ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಣೆ ಮಾಡುವ ವೇಳೆ ಸಾಮಾಜಿಕ ಅಂತರ ಉಲ್ಲಂಘಿಸಿ ಜನಜಂಗುಳಿ ಸೇರಿದ್ದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರದ ನೌಬಾದ್​ನಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ ಆಯೋಜಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್​ ಚಾಲನೆ ನೀಡಲು ಬಂದಿದ್ದರು.

ಕಿಟ್ ವಿತರಣೆ ವೇಳೆ ನೂಕುನೂಗ್ಗಲು

ಈ ಸಂದರ್ಭದಲ್ಲಿ ಕಿಟ್ ಪಡೆಯಲು ನೂರಾರು ಮಂದಿ ಜಮಾಯಿಸಿ ನೂಕುನುಗ್ಗಲು ಮಾಡಿದರು. ವಾಹನದಲ್ಲಿದ್ದ ಕಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಜನ ಮುಗಿಬಿದ್ದರು. ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಇರುವುದನ್ನು ನೋಡಿದ ಸಚಿವರು, ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿ ಹೋಗಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details