ಬೀದರ್: ನಗರದ ಓಲ್ಡ್ ಸಿಟಿಯಲ್ಲಿ 11 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢವಾಗ್ತಿದ್ದಂತೆ ಜಿಲ್ಲಾಡಳಿತ ಈ ಭಾಗವನ್ನು ಸಾರ್ವಜನಿಕ ಸಂಚಾರ ನಿಷೇಧಿತ ಪ್ರದೇಶ ಎಂದು ಮಾಡಿದ ಘೋಷಣೆ ವಿಫಲವಾಗಿದೆ. ಯಾಕಂದ್ರೆ, ಜನರು ಎಂದಿನಂತೆ ರಸ್ತೆಯಲ್ಲಿ ಓಡಾಡುತ್ತಿದ್ದಾರೆ.
ರೆಡ್ ಅಲರ್ಟ್ ಏರಿಯಾದಲ್ಲಿ ಜನಸಂಚಾರ.. ಹೀಗಾದ್ರೆ ಕೊರೊನಾ ನಿಯಂತ್ರಿಸುವುದು ಹೇಗೆ? - corona cases in bidar
ಅಂಬೇಡ್ಕರ್ ವೃತ್ತದಿಂದ ಒಲ್ಡ್ ಸಿಟಿ ಭಾಗದಲ್ಲಿ ಮಹಿಳೆಯರು, ಮಕ್ಕಳು ಬೈಕ್ ಸವಾರರು ರಸ್ತೆಗಿಳಿದಿದ್ದಾರೆ. ಅಲ್ಲಲ್ಲಿ ಇರುವ ಪೊಲೀಸ್ ಸಿಬ್ಬಂದಿ ಕಂಡರೂ ಕಾಣದಂತೆ ಸುಮ್ಮನಾಗಿರುವುದು ಆತಂಕ ಮೂಡಿಸಿದೆ.
ರೆಡ್ ಅಲರ್ಟ್ ಏರಿಯಾದಲ್ಲಿ ಜನಸಂಚಾರ
ದೆಹಲಿ ಜಮಾತ್ಗೆ ಹೋಗಿ ಬಂದ ಒಟ್ಟು 27 ಜನರ ಪೈಕಿ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಅದರಲ್ಲೂ ಒಲ್ಡ್ ಸಿಟಿಯಲ್ಲೇ 9 ಜನ ಸೋಂಕಿತರಿದ್ದಾರೆ. ಇವರ ಸಂಪರ್ಕದಲ್ಲಿರುವ ಒಟ್ಟು 82 ಜನರನ್ನು ಹೊಂ ಕ್ವಾರಂಟೈನ್‌ನಲ್ಲಿಡಲಾಗಿದೆ.