ಬೀದರ್: ಶಾಲಾ ಶೈಕ್ಷಣಿಕ ವನಮಹೋತ್ಸವ ಪ್ರವಾಸದ ವೇಳೆ ಸಾವಿಗೀಡಾಗಿದ್ದ ವಿದ್ಯಾರ್ಥಿನಿಯ ಪೋಷಕರು ನಾಲ್ಕು ತಿಂಗಳ ನಂತರ ಅನುಮಾನ ವ್ಯಕ್ತಪಡಿಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.
ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ನಿರ್ಣಾ ಗ್ರಾಮದ ಖಾಸಗಿ ಶಾಲೆಯ ವಿದ್ಯಾರ್ಥಿನಿ ರಕ್ಷಿತಾ (10) ನವೆಂಬರ್ 24 ರಂದು ಶಾಲೆಯಿಂದ ಪಿಕ್ನಿಕ್ ತೆರಳಿದ್ದಳು. ಈ ವೇಳೆ ಕರಕನಳ್ಳಿ ದೇವಸ್ಥಾನವೊಂದರ ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಳು.
ಮಗಳನ್ನು ಕೊಲೆ ಮಾಡಿದ್ದಾರೆಂದು ಆರೋಪಿಸಿ ಶಾಲೆ ಎದುರು ಪೋಷಕರ ಧರಣಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರವಿಕುಮಾರ್ ಸೇರಿದಂತೆ ಹಲವರು ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಮನ್ನಾಖೇಳಿ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ಕರಕನಳ್ಳಿ ರಕ್ಷಿತಾರಣ್ಯ ಪ್ರದೇಶದಲ್ಲಿ ಮಾರಮ್ಮನ ದೇವಸ್ಥಾನ ಬಳಿ ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನ್ಯಾಯ ಸಿಗುವವರೆಗೂ ಇಲ್ಲೇ ಇರುತ್ತೇವೆ ಎಂದು ಶಾಲೆ ಮುಂದೆಯೇ ಪೋಷಕರು ಧರಣಿ ಆರಂಭಿಸಿದ್ದಾರೆ.