ಕರ್ನಾಟಕ

karnataka

ETV Bharat / state

ಬೀದರ್​​​ನಲ್ಲಿ ಆಪರೇಷನ್ ಕಮಲ: 'ಕೈ' ಬಿಟ್ಟು 'ಕಮಲ' ಮುಡಿದ ಪಟ್ಟಣ ಪಂಚಾಯತ್​​ ಸದಸ್ಯರು - ಸಚಿವ ಪ್ರಭು ಚವ್ಹಾಣ್ ನೇತೃತ್ವದಲ್ಲಿ ನಡೆದ ಸಮಾರಂಭ

ಇಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​​ರವರ ನೇತೃತ್ವದಲ್ಲಿ ನಗರದಲ್ಲಿ ಬಿಜೆಪಿ ಬಹಿರಂಗ ಸಮಾವೇಶ ನಡೆಸಿತು. ಈ ವೇಳೆ ನಾಲ್ವರು ಪಂಚಾಯತ್​ ಸದಸ್ಯರು ಕಾಂಗ್ರೆಸ್​ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಕಾರ್ಯಕ್ರಮದಲ್ಲಿ ಕೋವಿಡ್​ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದ್ದು ಕಂಡುಬಂತು.

Panchayat members joined to BJP party in Bidar
ಬಿಜೆಪಿ ಸೇರಿದ ಪಂಚಾಯಿತಿ ಸದಸ್ಯರು

By

Published : Aug 25, 2021, 6:21 PM IST

ಬೀದರ್:ಪಟ್ಟಣ ಪಂಚಾಯತ್​ ಮೂವರು ಸದಸ್ಯರು ಸೇರಿದಂತೆ ಜಿ.ಪಂ. ಸದಸ್ಯೆ ಹಾಗೂ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಹಿರಂಗ ಸಮಾವೇಶ ಮಾಡುವ ಮೂಲಕ ಬಿಜೆಪಿ ಸೇರ್ಪಡೆಯಾದರು.

ಬೀದರ್​ನಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶ

ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಿಕಟಪೂರ್ವ ಜಿಲ್ಲಾ ಪಂಚಾಯತ್​ ಸದಸ್ಯೆ ಸಂಧ್ಯಾರಾಣಿ ರಾಮ, ಪಟ್ಟಣ ಪಂಚಾಯತ್​ ಸದಸ್ಯ ಧೋಂಡಿಬಾ ನರೋಟೆ, ರಾಧಾಬಾಯಿ ಕೃಷ್ಣ ಹಾಗೂ ಗುಂಡಪ್ಪ ಮುದಾಳೆ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​​ರವರ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದಿಂದ ಕನ್ನಡಾಂಬೆ ವೃತ್ತದವರೆಗೆ ಬೈಕ್ ಮೆರವಣಿಗೆ ನಡೆಸಿ ನಂತರ ತೆರೆದ ವಾಹನದಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದವರೆಗೆ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆಯಲ್ಲಿ ಸಚಿವರಿಗೆ 5 ಕ್ವಿಂಟಲ್ ಹಣ್ಣಿನ ಮಾಲೆಯನ್ನು ಕ್ರೇನ್ ಮೂಲಕ ಹಾಕುವುದರೊಂದಿಗೆ ಸನ್ಮಾನಿಸಲಾಯಿತು.

ಕೊರೊನಾ ನಿಯಮ ಉಲ್ಲಂಘನೆ:

ಕೋವಿಡ್​ ನಿಯಮ ಉಲ್ಲಂಘನೆ

ಇಂದು ನಡೆದ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸಾಮಾಜಿಕ ಅಂತರವಾಗಲಿ, ಮಾಸ್ಕ್​ ಧರಿಸದೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ABOUT THE AUTHOR

...view details