ಕರ್ನಾಟಕ

karnataka

ETV Bharat / state

ಕಲ್ಯಾಣ ಪರ್ವ ಮೆರವಣಿಗೆ ವಿರೋಧಿಸಿ ಬಸವ ಭಕ್ತರಿಂದ ಪ್ರತಿಭಟನೆ.. - Basavadal

ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ನಡೆದ ಕಲ್ಯಾಣ ಪರ್ವದ ಕೊನೆಯ ದಿನವಾದ ಭಾನುವಾರ ಮಹಾ ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಗರದ ಕೋಟೆಯಿಂದ ಬಸವ ಮಹಾಮನೆವರೆಗೆ ನಡೆಯುತ್ತಿದ್ದ ಮೆರವಣಿಗೆ ವೇಳೆ ದಾರಿ ಮಧ್ಯೆ ಬಸವ ವೃತ್ತದಲ್ಲಿ ಜಮಾಯಿಸಿದ ಬಸವಾಭಿಮಾನಿಗಳು, ಪರ್ವಕ್ಕೆ ವಿರೋಧಿಸಿ ಧಿಕ್ಕಾರದ ಘೋಷಣೆ ಕೂಗಿದರು.

opposition-to-the-kalyan-parava-procession

By

Published : Oct 13, 2019, 5:01 PM IST

ಬಸವಕಲ್ಯಾಣ : ಶರಣ ಭೂಮಿ ಬಸವಕಲ್ಯಾಣದಲ್ಲಿ ನಡೆಯುತ್ತಿರುವ ಕಲ್ಯಾಣ ಪರ್ವಕ್ಕೆ ನಗರದಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಎರಡು ಕಡೆಯಿಂದ ಉದ್ರಿಕ್ತಗೊಂಡಿದ್ದ ಗುಂಪಿನಿಂದ ಪರ-ವಿರೋಧ ಘೋಷಣೆ ಕೂಗಲಾಯಿತು. ಉದ್ರಿಕ್ತ ಯುವಕರಿಂದ ಚಪ್ಪಲಿ ಪ್ರದರ್ಶನ ನಡೆದರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಡಿಪಿಸಿ ಅಧ್ಯಕ್ಷರ ಮೇಲೆ ಕಲ್ಲು ತೂರಿದ ಘಟನೆಯೂ ನಡೆಯಿತು.

ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ನಡೆದ ಕಲ್ಯಾಣ ಪರ್ವದ ಕೊನೆಯ ದಿನವಾದ ಭಾನುವಾರ ಮಹಾ ಜಗದ್ಗುರು ಮಾತೆ ಗಂಗಾದೇವಿ ಅವರ ನೇತೃತ್ವದಲ್ಲಿ ನಗರದ ಕೋಟೆಯಿಂದ ಬಸವ ಮಹಾ ಮನೆವರೆಗೆ ನಡೆಯುತ್ತಿದ್ದ ಮೆರವಣಿಗೆ ವೇಳೆ ದಾರಿ ಮಧ್ಯೆ ಬಸವ ವೃತ್ತದಲ್ಲಿ ಜಮಾಯಿಸಿದ ಬಸವಾಭಿಮಾನಿಗಳು, ಪರ್ವಕ್ಕೆ ವಿರೋಧಿಸಿ ಧಿಕ್ಕಾರದ ಘೋಷಣೆ ಕೂಗಿದರು. ಗುರು ಬಸವಣ್ಣನವರ ವಚನಗಳ ಕೊನೆಯಲ್ಲಿದ್ದ "ಕೂಡಲ ಸಂಗಮದೇವ" ಎನ್ನುವ ವಚನಾಂಕಿತವನ್ನು "ಲಿಂಗದೇವ" ಎಂದು ಬದಲಾಯಿಸಿರುವ, ಕಲ್ಯಾಣ ಪರ್ವದ ರೂವಾರಿ ಲಿಂಗೈಕ್ಯ ಮಾತೆ ಮಹಾದೇವಿ, ಜಗದ್ಗುರು ಮಾತೆ ಗಂಗಾದೇವಿ, ಬಸವದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಬಸವಣ್ಣನವರ ವಚನಾಂಕಿತ ತಿರುಚಿದ ಮಾತೆ ಮಹಾದೇವಿ ಅನುಯಾಯಿಗಳಿಗೆ ಬಸವಣ್ಣನವರ ಹೆಸರಿನಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಕಲ್ಯಾಣ ಪರ್ವದ ಮೆರೆವಣಿಗೆ ಬಸವ ವೃತ್ತಕ್ಕೆ ಆಗಮಿಸಿದಾಗ ಎರಡು ಕಡೆಯವರಿಂದ ಪರ-ವಿರೋಧ ಘೋಷಣೆ ಕೂಗಲಾರಂಭಿಸಿದರು. ಉದ್ರಿಕ್ತಗೊಂಡ ಕೆಲ ಯುವಕರು ಮೆರವಣಿಗೆಗೆ ವಿರೋಧಿಸಿ ಘೋಷಣೆ ಕೂಗುತ್ತ ಚಪ್ಪಲಿ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ ಅವರ ಮೇಲೆ ವ್ಯಕ್ತಿಯೊಬ್ಬ ಕಲ್ಲು ತೂರಿದ್ದರಿಂದ ರಗಟೆ ಅವರ ತಲೆಗೆ ಗಾಯವಾದ ಪ್ರಸಂಗವು ಜರುಗಿತು.

ಬಸವ ಭಕ್ತರಿಂದ ಪ್ರತಿಭಟನೆ

ಪ್ರತಿಭಟನೆ ಹಿನ್ನೆಲೆಯಲ್ಲಿ ಬಸವ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪುವ ಸಂಭವ ಅರಿತ ಡಿವೈಎಸ್ಪಿ ಮಹೇಶ್ವರಪ್ಪ, ಸಿಪಿಐ ಮಲ್ಲಿಕಾರ್ಜುನ ಯಾತನೂರ, ಪಿಎಸ್‌ಐ ಸುನಿಲಕುಮಾರ ನೇತೃತ್ವದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಪರಿಸ್ಥಿತಿ ಶಾಂತಗೊಳಿಸಿದರು. ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಪದಾಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳ ಸದಸ್ಯರು ಹಾಗೂ ಬಸವಾಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details