ಬಸವಕಲ್ಯಾಣ (ಬೀದರ್):ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಯ ಮೂವರು ವೈದ್ಯರು ಹಾಗೂ 3 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, 48 ಗಂಟೆಗಳ ಕಾಲ ಆಸ್ಪತ್ರೆ ಓಪಿಡಿ ಸೇವೆ ಸ್ಥಗಿತಗೊಳಿಸಲಾಗಿದೆ.
ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಕೊರೊನಾ: 48 ಗಂಟೆಗಳ ಕಾಲ ಓಪಿಡಿ ಸೇವೆ ಬಂದ್ - basavakalyana news
ಬಸವಕಲ್ಯಾಣ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಮೂವರು ವೈದ್ಯರು ಹಾಗೂ 3 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, 48 ಗಂಟೆಗಳ ಕಾಲ ಆಸ್ಪತ್ರೆ ಓಪಿಡಿ ಸೇವೆ ಸ್ಥಗಿತಗೊಳಿಸಲಾಗಿದೆ.
ನಗರದ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ, ಓರ್ವ ಮಹಿಳಾ ತಜ್ಞ ವೈದ್ಯೆ, ಓರ್ವ ಮಹಿಳಾ ಡಿ.ಗ್ರೂಪ್ ಸಿಬ್ಬಂದಿ, ಓರ್ವ ಪುರುಷ ಹಾಗೂ ಓರ್ವ ಮಹಿಳಾ ಸ್ಟಾಫ್ನರ್ಸ್ಗೆ ಸೋಂಕು ತಗುಲಿದೆ. ಇದಲ್ಲದೇ, ಕೆಲ ದಿನಗಳ ಹಿಂದೆ ಸೋಂಕಿಗೆ ಒಳಗಾಗಿದ್ದ ವೈದ್ಯರೊಬ್ಬರಿಗೆ ಮತ್ತೆ ಸೋಂಕು ತಗುಲಿದೆ. ಹೀಗಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ತುರ್ತು ಚಿಕಿತ್ಸೆಗಳಿಗೆ ಮಾತ್ರ ಆಸ್ಪತ್ರೆ ಚಿಕಿತ್ಸೆ ನೀಡಲಾಗುತ್ತದೆ. ಮಂಗಳವಾರದವರೆಗೆ ಆಸ್ಪತ್ರೆಯ ಓಪಿಡಿ ಸೇವೆ ಬಂದ್ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
21 ಹೊಸ ಪ್ರಕರಣ ಪತ್ತೆ:ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ 21 ಜನರಲ್ಲಿ ಸೋಂಕು ಧೃಡಪಟ್ಟಿದೆ. ಈ ಮೂಲಕ ತಾಲೂಕಿನ ಸೋಂಕಿತರ ಸಂಖ್ಯೆ 4,53ಕ್ಕೆ ಏರಿಕೆಯಾಗಿದೆ.