ಕರ್ನಾಟಕ

karnataka

ETV Bharat / state

ಹೊಲದಲ್ಲಿ ಕೆಲಸ ಮಾಡಿ ಆನ್​ಲೈನ್ ಶಿಕ್ಷಣ ಪಡೆಯಲು ಮುಂದಾದ ಬಡ ವಿದ್ಯಾರ್ಥಿಗಳು!

ಆನ್​ಲೈನ್ ಶಿಕ್ಷಣ ನೀಡುತ್ತಿರುವ ಸರ್ಕಾರದ ಯೋಜನೆ ಈ ಬಡ ವಿದ್ಯಾರ್ಥಿಗಳ ಪಾಲಿಗೆ ಕಷ್ಟಕರವಾಗಿದ್ದು, ಬೀದರ್ ತಾಲೂಕಿನ ಗಾದಗಿ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳು ಹೇಗಾದರೂ ಮಾಡಿ ಶಿಕ್ಷಣ ಪಡೆಯಬೇಕು ಎಂದು ಬೇರೆಯವರ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ.

bidar
ಹತ್ತಿ ಬಿಡಿಸುತ್ತಿರುವ ವಿದ್ಯಾರ್ಥಿ

By

Published : Nov 16, 2020, 9:38 PM IST

ಬೀದರ್:ಕೊರೊನಾ ಸಂಕಷ್ಟದಿಂದ ಶಾಲೆ, ಕಾಲೇಜುಗಳು ಪ್ರಾರಂಭವಾಗದೆ ಮಕ್ಕಳಿಗೆ ಮನೆಯಲ್ಲೇ ಆನ್​ಲೈನ್ ಶಿಕ್ಷಣ ನೀಡುತ್ತಿರುವ ಸರ್ಕಾರದ ಯೋಜನೆ ಈ ಬಡ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದೆ.

ಬೇರೆಯವರ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಸೇರಿಕೊಂಡು ಆನ್​ಲೈನ್ ಶಿಕ್ಷಣ ಪಡೆಯಲು ಮುಂದಾದ ಬಡ ವಿದ್ಯಾರ್ಥಿಗಳು

ಬೀದರ್ ತಾಲೂಕಿನ ಗಾದಗಿ ಗ್ರಾಮದಲ್ಲಿ ಕೆಲ ವಿದ್ಯಾರ್ಥಿಗಳು ಹೇಗಾದರೂ ಮಾಡಿ ಶಿಕ್ಷಣ ಪಡೆಯಬೇಕು ಎಂದು ಬೇರೆಯವರ ಜಮೀನಿನಲ್ಲಿ ಹತ್ತಿ ಬಿಡಿಸುವ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಒಂದು ದಿನಕ್ಕೆ 12 ಕೆಜಿವರೆಗೆ ಹತ್ತಿ ಬಿಡಿಸ್ತಾ ಇದಾರೆ. ಇದಕ್ಕೆ ರೈತರು ಪ್ರತಿ ಕೆಜಿಗೆ 6 ರೂಪಾಯಿಯಂತೆ ಹಣ ನೀಡ್ತಿದ್ದು, ದಿನಕ್ಕೆ ಎನಿಲ್ಲ ಅಂದ್ರು ನೂರು ರೂಪಾಯಿ ಸಂಪಾದನೆ ಮಾಡ್ತಿದ್ದಾರೆ. ಈ ಹಣ ಒಟ್ಟುಗೂಡಿಸಿ ನಾವೆಲ್ಲರೂ ಮೊಬೈಲ್ ಖರೀದಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ಆನ್​ಲೈನ್ ಶಿಕ್ಷಣ ಪಡೆಯುವುದು ಬಡವರ ಪಾಲಿಗೆ ಬಹಳ ಕಷ್ಟವಾಗಿದೆ. ಹೇಗಾದರೂ ಶಾಲಾ-ಕಾಲೇಜು ಆರಂಭವಾದ್ರೆ ನಮ್ಮ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಬಹುದು. ಆ ಕೆಲಸ ಆದಷ್ಟು ಬೇಗ ಆಗಬೇಕು ಎಂದು ಪೋಷಕರು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details