ಬೀದರ :ಜಿಲ್ಲೆಯ ವಿವಿಧೆಡೆಅಕ್ರಮವಾಗಿ ಗಾಂಜಾ ಬೆಳೆದು ಸಾಗಾಣೆ ಮತ್ತು ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದ್ದರು. ಈ ಮಾದಕ ವಸ್ತುವನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ಪಡೆದುಕೊಂಡು ನಿಯಮಾನುಸಾರ ನಾಶಗೊಳಿಸಿದೆ.
ಬೀದರ್: ಜೈವಿಕ ತ್ಯಾಜ್ಯ ವಿಲೇವಾರಿ ಘಟಕದಲ್ಲಿ 1 ಟನ್ ಅಕ್ರಮ ಗಾಂಜಾ ನಾಶ - ETv Bharat kannada news
ಬೀದರ್ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜಪ್ತಿಯಾದ ಅಂದಾಜು ಒಂದು ಟನ್ ಗಾಂಜಾ ನಾಶಪಡಿಸಲಾಗಿದೆ.
1 ಟನ್ ಅಕ್ರಮ ಗಾಂಜಾ ನಾಶ
ಧನ್ನೂರ ಗ್ರಾಮದಲ್ಲಿರುವ ಇನ್ವೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ 998 ಕೆಜಿ 390 ಗ್ರಾಂ ಗಾಂಜಾ ನಾಶಪಡಿಸಲಾಯಿತು. ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ ಬಾಬು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ, ಎ.ಎಸ್.ಪಿ. ಪೃತ್ವೀಕ ಶಂಕರ, ಬೀದರ್ ಪೊಲೀಸ್ ಉಪಾಧೀಕ್ಷಕ ಕೆ.ಎಮ್.ಸತೀಶ ಸೇರಿದಂತೆ ಪೊಲೀಸ್ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಗ್ರಾಹಕರ ಸೋಗಿನಲ್ಲಿ ಪೊಲೀಸ್ ಕಾರ್ಯಾಚರಣೆ ; 263 ಕೆಜಿ ಗಾಂಜಾ ಜಪ್ತಿ, ಇಬ್ಬರು ಅರೆಸ್ಟ್