ಕರ್ನಾಟಕ

karnataka

ETV Bharat / state

ವಿದೇಶದಿಂದ ಹಿಂದಿರುಗಿದ ಯುವಕನಿಗೆ ಕೊರೊನಾ ಶಂಕೆ, ಆಸ್ಪತ್ರೆಗೆ ದಾಖಲು - ಕೊರೊನಾ ವೈರಸ್​​

ಉದ್ಯೋಗಕ್ಕಾಗಿ ಅಬುದಾಬಿಗೆ ತೆರಳಿ ತವರಿಗೆ ಮರಳಿದ ತಾಲೂಕಿನ ಮುಡಬಿ ಹೊಬಳಿ ವ್ಯಾಪ್ತಿಯ ಶೇಕು ತಾಂಡಾದ ನಿವಾಸಿ 29 ವರ್ಷದ ಯುವಕನಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಂಡು ಬಂದಿದೆ.

one more corona suspected case in bidar
ಯುವಕನಿಗೆ ಕೊರೊನಾ ಶಂಕೆ

By

Published : Mar 18, 2020, 10:46 AM IST

ಬಸವಕಲ್ಯಾಣ/ಬೀದರ್​​:ಹೊರ ದೇಶದಿಂದ ವಾಪಸ್ ಸ್ವಗ್ರಾಮಕ್ಕೆ ಆಗಮಿಸಿದ ವ್ಯಕ್ತಿಗೆ ಮಾರಕ ಕೊರೊನಾ ಶಂಕೆ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯೋಗಕ್ಕಾಗಿ ಅಬುದಾಬಿಗೆ ತೆರಳಿ ತವರಿಗೆ ಮರಳಿದ ತಾಲೂಕಿನ ಮುಡಬಿ ಹೊಬಳಿ ವ್ಯಾಪ್ತಿಯ ಶೇಕು ತಾಂಡಾದ ನಿವಾಸಿ 29 ವರ್ಷದ ಯುವಕನಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಂಡು ಬಂದಿದೆ. ಈ ಹಿನ್ನೆಲೆ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಈತನಿಗೆ ವೈರಸ್ ತಗುಲಿರುವ ಬಗ್ಗೆ ಖಚಿತತೆಗಾಗಿ ಆತನ ಗಂಟಲು ಹಾಗೂ ರಕ್ತದ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೊರೊನಾ ಶಂಕೆ ಹಿನ್ನೆಲೆಯಲ್ಲಿ ವಿದೇಶದಿಂದ ಬಂದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಬುದಾಬಿಯಿಂದ ಫೆ.10 ರಂದು ಈತ ವಾಪಸ್ಸು ಬಂದಿದ್ದಾನೆ. ಕೆಮ್ಮು ಹಾಗೂ ಗಂಟಲು ನೋವು ಕಾಣಿಸಿಕೊಂಡ ಹಿನ್ನೆಲೆ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಈತನಲ್ಲಿರುವ ಸೋಂಕಿನ ಲಕ್ಷಣಗಳನ್ನು ಗಮನಿಸಿದ ವೈದ್ಯರು, ಕೊರೊನಾ ಟೆಸ್ಟ್​​ಗೆ ಸ್ಥಾಪಿಸಲಾದ ವಿಶೇಷ ವಾರ್ಡ್​​ಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರೆಸಿದ್ದಾರೆ.

ಬೀದರ್​ ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಶಂಕಿತರ ಸಂಖ್ಯೆ 3 ಕ್ಕೇರಿದೆ.

ABOUT THE AUTHOR

...view details