ಬೀದರ್: ಮಹಾರಾಷ್ಟ್ರದ ಲಾತೂರ್ನಿಂದ ಗಡಿ ದಾಟಿ ಬಂದ 32 ಕಾರ್ಮಿಕರನ್ನು ಸ್ಥಳೀಯ ಅಧಿಕಾರಿಗಳು ಮತ್ತೆ ರಾಜ್ಯದ ಗಡಿಯಿಂದ ವಾಪಸ್ ಕಳಿಸಿದ್ದಾರೆ. ಜಿಲ್ಲೆಯ ಕಮನಗರ ಹೊರ ವಲಯದಲ್ಲಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚೆಕ್ಪೋಸ್ಟ್ ತಪ್ಪಿಸಿಕೊಂಡು ಬಳ್ಳಾರಿ ಮೂಲಕ 12 ಮಂದಿ ಯುವಕರು ಮನೆ ಸೇರಲು ಕಾಲ್ನಡಿಗೆಯಲ್ಲಿ ಹೊರಟಿದ್ಧಾರೆ. ಇದನ್ನು ಗಮನಿಸಿದ ಸ್ಥಳೀಯ ಅಧಿಕಾರಿಗಳು ಮತ್ತೆ ಅವರನ್ನು ರಾಜ್ಯದ ಗಡಿ ದಾಟಿಸಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರನ್ನು ಮತ್ತೆ ವಾಪಸ್ ಕಳಿಸಿದ ಅಧಿಕಾರಿಗಳು - ಮಹಾರಾಷ್ಟ್ರದಿಂದ ಬಂದವರನ್ನು ಮತ್ತೆ ವಾಪಸ್ ಕಳಿಸಿದ ಅಧಿಕಾರಿಗಳು
ಕಳೆದೆರಡು ದಿನಗಳ ಹಿಂದೆ 20 ಕ್ಕೂ ಅಧಿಕ ಯುವಕರು ರಾಜ್ಯವನ್ನು ಪ್ರವೇಶಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಮಹಾರಾಷ್ಟ್ರದ ಉದಗಿರ್ನ ವಿವೇಕಾನಂದ ಕಾಲೇಜಿನಲ್ಲಿ ಕ್ವಾರಂಟೈನ್ನಲ್ಲಿ ಇಡುವಂತೆ ಸ್ಥಳೀಯ ಮಹಾರಾಷ್ಟ್ರ ಪೊಲಿಸರಿಗೆ ಸೂಚಿಸಿದ್ದರು.

ಕಳೆದೆರಡು ದಿನಗಳ ಹಿಂದೆ 20 ಕ್ಕೂ ಅಧಿಕ ಯುವಕರು ರಾಜ್ಯವನ್ನು ಪ್ರವೇಶಿಸಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಮಹಾರಾಷ್ಟ್ರದ ಉದಗಿರ್ನ ವಿವೇಕಾನಂದ ಕಾಲೇಜಿನಲ್ಲಿ ಕ್ವಾರಂಟೈನ್ನಲ್ಲಿ ಇಡುವಂತೆ ಸ್ಥಳೀಯ ಮಹಾರಾಷ್ಟ್ರ ಪೊಲಿಸರಿಗೆ ಸೂಚಿಸಿದ್ದರು. ಇಂದು ಮತ್ತೆ 12 ಮಂದಿ ಯುವಕರು ರಾಜ್ಯದ ಗಡಿ ಪ್ರವೇಶಿಸಿದ್ದರು. ಹೀಗಾಗಿ ಇವರನ್ನು ಕೂಡಾ ಡಿಗ್ಗಿ ಗ್ರಾಮದ ಬಳಿ ತಡೆದ ಅಧಿಕಾರಿಗಳು ಮತ್ತೆ ವಾಪಸ್ ಕಳಿಸಿದ್ದು ಅವರನ್ನು ಕೂಡಾ ಕ್ವಾರಂಟೈನ್ನಲ್ಲಿರಿಸುವಂತೆ ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೊಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಈ ಕಠಿಣ ಕ್ರಮ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.