ಕರ್ನಾಟಕ

karnataka

ETV Bharat / state

ದರೋಡೆಕೋರರ ಮೇಲೆ ಫೈರಿಂಗ್.. ಸಿನಿಮಾ ಸ್ಟೈಲ್ ನಲ್ಲಿ ನಟೋರಿಯಸ್ ಗ್ಯಾಂಗ್ ಎಸ್ಕೇಪ್ ..! - ದರೋಡೆಕೋರರ ಗ್ಯಾಂಗ್​ ಮೇಲೆ ಪೊಲೀಸ್​ ಫೈರಿಂಗ್​​

ದರೋಡೆಕೋರರ ಗ್ಯಾಂಗ್​ವೊಂದರ ಮೇಲೆ ಬೀದರ್​ನಲ್ಲಿ ಪೊಲೀಸರು ಫೈರಿಂಗ್ ಮಾಡಿದ್ದು, ಸಿನಿಮಾ ಸ್ಟೈಲ್ ನಲ್ಲಿ ಕಾರು ಬಿಟ್ಟು ದರೋಡೆಕೋರರು ಎಸ್ಕೇಪ್ ಆಗಿದ್ದಾರೆ.

ಸಿನಿಮಾ ಸ್ಟೈಲ್ ನಲ್ಲಿ ನಟೋರಿಯಸ್ ಗ್ಯಾಂಗ್ ಎಸ್ಕೇಪ್ ..!

By

Published : Sep 24, 2019, 4:21 PM IST

ಬೀದರ್: ಡಕಾಯತಿಗೆ ಹೊಂಚು ಹಾಕಿ ಕಾದುಕುಳಿತಿದ್ದ ದರೋಡೆಕೋರರ ಗ್ಯಾಂಗ್​ವೊಂದರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಸಿನಿಮಾ ಸ್ಟೈಲ್ ನಲ್ಲಿ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಜಿಲ್ಲಾಯ ಹುಮನಾಬಾದ್ ತಾಲೂಕಿನ ನಂದಗಾಂವ್ ಬಳಿ ಈ ಘಟನೆ ನಡೆದಿದೆ. ಹಳ್ಳಿಖೇಡ ಪಿಎಸ್​ಐ ಮಹಾಂತೇಶ ಅವರಿಗೆ ಹುಡುಗಿ ಎಂಬ ಗ್ರಾಮದ ಬಳಿ ಲಾರಿ ಚಾಲಕನ ಮೇಲೆ ಹಲ್ಲೆ ಮಾಡಿ ನಗದು 6000 ರುಪಾಯಿ ದರೋಡೆ ಮಾಡಿದ್ದ ಗ್ಯಾಂಗ್ ಹಳ್ಳಿಖೇಡ ಮಾರ್ಗದಲ್ಲಿ ಸಾಗ್ತಿದೆ ಎಂಬ ಮಾಹಿತಿ ಸಿಕ್ಕಿದೆ. ನಂತರ ಅಲರ್ಟ್​​ ಆದ ಪಿಎಸ್ ಐ ಹಾಗೂ ತಂಡ ಗಸ್ತು ಚುರುಕು ಮಾಡಿದೆ.

ಹೈದ್ರಾಬಾದ್​ನ ರಾಜೀವಗಾಂಧಿ ವಿಮಾನ ನಿಲ್ದಾಣದ ಎದುರಲ್ಲಿ ಕ್ಯಾಬ್ ಕಳ್ಳತನ ಮಾಡಿ ಬಂದಿದ್ದ ಈ ಗ್ಯಾಂಗ್ ಅನ್ನು ಖಾನಾಪೂರವಾಡಿ ಬಳಿ ಪೊಲೀಸರು ತಡೆದಿದ್ದಾರೆ. ಹತೋಟಿಗೆ ಬರದೆ ಇದ್ದಾಗ ಪಿಎಸ್ ಐ ತಮ್ಮ ಬಳಿ ಇದ್ದ ಪಿಸ್ತೂಲ್ ತೆಗೆದು ಎರಡು ಸುತ್ತು ಫೈರಿಂಗ್ ಮಾಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಜಿಲ್ಲೆಯ ವಿವಿಧ ಠಾಣೆಯ ಪೊಲೀಸರು ಕೂಂಬಿಂಗ್​ ನಡೆಸಿದ್ದಾರೆ. ಸ್ಥಳದಲ್ಲಿ ಬೀದರ್ ಎಸ್.ಪಿ ಟಿ.ಶ್ರೀಧರ ಮೊಕ್ಕಾಂ ಹೂಡಿದ್ದು ನಟೋರಿಯಸ್ ಗ್ಯಾಂಗ್ ಪತ್ತೆಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details