ಕರ್ನಾಟಕ

karnataka

ETV Bharat / state

ಶಿಕ್ಷಕರ ಪಾಲಿಗೆ ಬೆಳಕಿನ ಹಬ್ಬವಾಗಿಲ್ಲ ದೀಪಾವಳಿ: ಹುಮನಾಬಾದ್ ಟೀಚರ್​​ಗಳಿಗೆ ಸಿಕ್ಕಿಲ್ಲ 3 ತಿಂಗಳ ಸಂಬಳ! - ಉಸ್ತುವಾರಿ ಸಚಿವ ಪ್ರಭು ಚವ್ಹಾಣ

ಸರ್ಕಾರಿ ನೌಕರರಿಗೆ ತಿಂಗಳಾದ್ರೆ ಸಾಕು ಕೈಗೆ ಸಂಬಳ ಸೇರಿ ಸಂಭ್ರಸುತ್ತಾರೆ. ಆದರೆ, ಕಳೆದ ಮೂರು ತಿಂಗಳಿನಿಂದ ಬೀದರ್​​​ನ ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಸಂಬಳವಾಗದೆ ಜಿಲ್ಲೆಯ ಉಸ್ತುವಾರಿ ಸಚಿವರ ಮೊರೆ ಹೋಗಿದ್ದಾರೆ.

ಟೀಚರ್

By

Published : Oct 23, 2019, 5:55 AM IST

Updated : Oct 23, 2019, 6:31 AM IST

ಬೀದರ್: ಮೂರು ತಿಂಗಳಿಂದ ವೇತನವಿಲ್ಲದೆ ಕಷ್ಟದಲ್ಲಿರುವಹುಮನಾಬಾದ್ ತಾಲೂಕಿನ ಶಿಕ್ಷಕರು ಜಿಲ್ಲೆಯ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ ಮುಂದೆತಮ್ಮ ಗೋಳನ್ನು ತೋಡಿಕೊಂಡ ಘಟನೆ ನಡೆದಿದೆ.

ಹುಮನಾಬಾದ್ ತಾಲೂಕಿನ ಸರ್ಕಾರಿ ಶಿಕ್ಷಕರಿಗೆ ಕಳೆದ ಮೂರು ತಿಂಗಳಿನಿಂದ ಸಂಬಳವಾಗಿಲ್ಲ, ಹೀಗಾಗಿ ಶಿಕ್ಷಕರ ಕೈಯಲ್ಲಿ ದುಡ್ಡಿಲ್ಲದೆ ಬೆಳಕಿನ ದೀಪಾವಳಿ ಕೂಡ ಕತ್ತಲಮಯವಾಗಿದೆ. ನೊಂದ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮುಂದೆ ತಮ್ಮ ಅಳಲು ತೊಂಡಿಕೊಂಡಿದ್ದಾರೆ.

ಉಸ್ತುವಾರಿ ಸಚಿವರ ಮೊರೆ ಹೋದ ಶಿಕ್ಷಕರು

ಪರಿಸ್ಥಿತಿಯನ್ನು ಅರಿತ ಸಚಿವರು ಕೂಡಲೇ ಅಧಿಕಾರಿಗೆಳಿಗೆ ಫೋನ್​​ ಮಾಡಿ ಶಿಕ್ಷಕರ ಎದುರೇ ಸಂಬಳ ಮಾಡುವಂತೆ ಸೂಚಿಸಿದ್ದಾರೆ. ಇನ್ನು ಹಬ್ಬದ ಒಳಗಾಗಿ ಸಂಬಳ ಮಾಡಿಸುತ್ತೇನೆ ಎಂದು ಶಿಕ್ಷಕರಿಗೆ ಭರವಸೆ ಕೊಟ್ಟಿದ್ದಾರೆ.

Last Updated : Oct 23, 2019, 6:31 AM IST

ABOUT THE AUTHOR

...view details