ಬೀದರ್:ಸರ್ಕಾರ ಕೊರೊನಾ ಸೋಂಕಿತರ ಸಾವಿನ ಸಂಖ್ಯೆಯ ಮಾಹಿತಿ ತಪ್ಪು ನೀಡುತ್ತಿದೆ. ಸಾವು ಹೆಚ್ಚಾದ್ರು ಕಮ್ಮಿ ತೋರಿಸಲಾಗ್ತಿದೆ ಎಂಬುದು ಕಾಂಗ್ರೆಸ್ನವರ ಭ್ರಮೆ ಎಂದು ಆರೋಗ್ಯ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದಾರೆ.
ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರ ತಪ್ಪು ಮಾಹಿತಿ ನೀಡುತ್ತಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಸೋಂಕಿತರ ಸಾವಿನ ಸಂಖ್ಯೆ ಐಸಿಎಂಆರ್ನಿಂದ ಅಧಿಕೃತ ಪ್ರಕಟವಾಗ್ತಿದೆ. ತಪ್ಪು ಮಾಹಿತಿ ನೀಡೋ ಪ್ರಶ್ನೆ ಬರೋದಿಲ್ಲ. ಅನ್ಯ ಕಾರಣಕ್ಕೆ ಸಾವನ್ನಪ್ಪಿದವರ ಮಾಹಿತಿ ಕೊರೊನಾ ಸೋಂಕಿತರ ಪಟ್ಟಿಗೆ ತೆಗೆದುಕೊಳ್ಳಲು ಹೇಗೆ ಸಾಧ್ಯ ಎಂದರು.
ರಾಜ್ಯದಲ್ಲಿ ಕೊರೊನಾ ಸೋಂಕಿನ ಚೈನ್ ಕಟ್ ಮಾಡಬೇಕಾಗಿದೆ. ಇದಕ್ಕಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಕಠಿಣ ಕ್ರಮಗಳನ್ನು ಅನುಸರಿಸಿದ್ದಾರೆ. ಜನರು ಸಹಕಾರ ನೀಡಬೇಕಾಗಿದೆ. 14 ದಿನ ಈ ಕಾರ್ಯಾಚರಣೆ ನಡೆಯಲಿದ್ದು, ರಾಜ್ಯದಲ್ಲಿ ಸೋಂಕಿನ ಪ್ರಮಾಣ ಕಮ್ಮಿಯಾಗದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.