ಬಸವಕಲ್ಯಾಣ:ಪಾಕಿಸ್ತಾನದ ಜೊತೆ ನಂಟು ಹೊಂದಿರುವ ಸಂಶಯದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳ ತಂಡ ಭಾನುವಾರ ನಗರಕ್ಕೆ ಭೇಟಿ ನೀಡಿದ್ದು, ಯುವಕನ್ನೊಬ್ಬನನ್ನು ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದು ಬಂದಿದೆ.
ನಗರದ ಆಶ್ರಯ ಕಾಲೊನಿ ಬಳಿಯ (ಅಮೀರ್ ಪೇಟೆ) ಖಡಿಝಂಡಾ ಬಡಾವಣೆಯ 25 ವರ್ಷದೊಳಗಿನ ಯುಕನೊಬ್ಬನನ್ನು ಎನ್‌ಐಎ ಅಧಿಕಾರಿಗಳ ತಂಡ ವಿಚಾರಣೆಗೆ ಒಳಪಡಿಸಿದೆ. ಆದರೆ ಯಾವ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.
ಇದನ್ನೂ ಓದಿ...ಫೇಸ್ಬುಕ್ನಲ್ಲಿ ಪರಿಚಯ, ನಂತರ ಪ್ರೇಮ; ಮದುವೆಯಾಗಿ 9 ತಿಂಗಳ ಬಳಿಕ ಕೈಕೊಟ್ಟ ಭೂಪ
ಪಾಕಿಸ್ತಾನದ ವ್ಯಕ್ತಿಗಳೊಂದಿಗೆ ಈತ ಮೊಬೈಲ್ ಮೂಲಕ ಸಂಪರ್ಕ ಸಾಧಿಸಿದ್ದಾನೆ. ಹೀಗಾಗಿ ಆತನ ಮೊಬೈಲ್ ಟವರ್ ಜಾಡು ಹಿಡಿದು ಉತ್ತರ ಪ್ರದೇಶದ ಲಖ್ನೋ ಹಾಗೂ ಹೈದರಾಬಾದ್ನ ಎನ್‌ಐಎ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ನಗರಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.
ಯುವಕನ ಮನೆ ಪರಿಶೀಲಿಸಿದಾಗ ಸುಮಾರು 5ರಿಂದ 6 ಸಿಮ್ ಕಾರ್ಡ್ ಮತ್ತು 2 ಮೊಬೈಲ್ಗಳು ಪತ್ತೆಯಾಗಿವೆ. ಅವುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.