ಕರ್ನಾಟಕ

karnataka

ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾಲ್ಕಿ ಪೊಲೀಸರಿಂದ ಹೊಸ ಪ್ಲಾನ್​​ - ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾಲ್ಕಿ ಪೊಲೀಸರಿಂದ ಹೊಸ ಪ್ಲ್ಯಾನ್

ತರಕಾರಿ, ಕಿರಾಣಿ ಹಾಗೂ ಔಷಧ ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ ಜನರು ಮಾರುಕಟ್ಟೆಗೆ ಬಂದಾಗ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾಲ್ಕಿ ಡಿವೈಎಸ್ ಪಿ ನೇತೃತ್ವದಲ್ಲಿ ಪೊಲೀಸರ ತಂಡ ಸುಣ್ಣದಲ್ಲಿ 5 ಅಡಿ ಅಂತರದ ವೃತಗಳನ್ನು ಹಾಕಿ ವ್ಯಾಪಾರಿಗಳಿಗೆ ವೃತ್ತದಲ್ಲಿ ನಿಂತು ಸರದಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿದರು.

New plan by Bhalki police to  social gap
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾಲ್ಕಿ ಪೊಲೀಸರಿಂದ ಹೊಸ ಪ್ಲ್ಯಾನ್

By

Published : Mar 25, 2020, 6:08 PM IST

ಬೀದರ್: ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್ ಡೌನ್ ಜಾರಿ ಮಾಡಲಾಗಿದೆ. ಆದ್ರೆ, ಜನರಿಗೆ ಅಗತ್ಯ ಸೌಲಭ್ಯ ಒದಗಿಸುವಾಗ ಆಗ್ತಿರುವ ಯೆಡವಟ್ಟು ತಪ್ಪಿಸಲು ಭಾಲ್ಕಿ ಡಿವೈಎಸ್ ಪಿ ನೇತೃತ್ವದಲ್ಲಿ ಪೊಲೀಸರ ತಂಡ ಹೊಸ ಪ್ಲಾನ್​​ ರೂಪಿಸಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಾಲ್ಕಿ ಪೊಲೀಸರಿಂದ ಹೊಸ ಪ್ಲ್ಯಾನ್

ತರಕಾರಿ, ಕಿರಾಣಿ ಹಾಗೂ ಔಷಧ ಸೇರಿದಂತೆ ಅಗತ್ಯ ಸೌಲಭ್ಯಗಳಿಗಾಗಿ ಜನರು ಮಾರುಕಟ್ಟೆಗೆ ಬಂದಾಗ ಸೋಂಕು ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆ ಭಾಲ್ಕಿ ಡಿವೈಎಸ್ ಪಿ ದೇವರಾಜ್.ಬಿ ಅವರು ಭಾಲ್ಕಿ ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಗ್ರಾಹಕರು ಮತ್ತು ಅಂಗಡಿ ವರ್ತಕರ ನಡುವೆ ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಸುಣ್ಣದಲ್ಲಿ 5 ಅಡಿ ಅಂತರದ ವೃತಗಳನ್ನು ಹಾಕಿ ವ್ಯಾಪಾರಿಗಳಿಗೆ ವೃತ್ತದಲ್ಲಿ ನಿಂತು ಸರದಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿದರು.

ಮೆಡಿಕಲ್ ಹಾಗೂ ದಿನಸಿ ಅಂಗಡಿ ಮುಂದೆ ಸುಮಾರು 5 ಅಡಿ ಅಂತರದ ವೃತಗಳನ್ನು ಹಾಕಿ ಒಬ್ಬ ಗ್ರಾಹಕನಿಂದ ಮತ್ತೊಬ್ಬರಿಗೆ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೆ ಮಾಸ್ಕ್​ ಹಾಕಿಕೊಂಡು ಬಂದವರಿಗೆ ಮಾತ್ರ ವಸ್ತುಗಳು ನೀಡಬೇಕು. ಸುಮ್ಮನೆ ಹಾಗೆ ಬಂದವರಿಗೆ ವಾಪಸ್​ ಕಳುಹಿಸಿ ಎಂದು ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ABOUT THE AUTHOR

...view details