ಬೀದರ್:ಬೀದರ್-ಹುಮನಾಬಾದ್ ಮಾರ್ಗವಾಗಿ ಹೊಸ 3 ವಿಶೇಷ ರೈಲುಗಳು ಚಲಿಸಲಿವೆ ಎಂದು ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ತಿಳಿಸಿದ್ದಾರೆ.
ಜನತೆಯ ಬಹು ದಿನದ ಬೇಡಿಕೆಗೆ ಅನುಗುಣವಾಗಿ, ವಾಯಾ ಬೀದರ್- ಹುಮನಾಬಾದ್ ಮಾರ್ಗವಾಗಿ, ನಾಂದೇಡ-ಯಶವಂತಪೂರ-ನಾಂದೇಡ (ರೈಲು ಸಂಖ್ಯೆ: 07093 / 07094), ಸೋಲ್ಹಾಪೂರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲ್ಹಾಪೂರ (ರೈಲು ಸಂಖ್ಯೆ: 01435/01436) ಮತ್ತು ಸೋಲ್ಹಾಪೂರ - ತಿರುಪತಿ - ಸೋಲ್ಹಾಪೂರ (ರೈಲು ಸಂಖ್ಯೆ: 01437/01438) ಒಟ್ಟು ಹೊಸ 3 ವಿಶೇಷ ರೈಲುಗಳು ಚಲಿಸಲಿದ್ದು ಈ ರೈಲುಗಳ ಸದೂಪಯೋಗ ಪಡೆದುಕೊಳ್ಳಬೇಕೆಂದು ಸಚಿವರು ಜನತೆಯಲ್ಲಿ ಮನವಿ ಮಾಡಿದರು.
ನಾಂದೇಡ-ಯಶವಂತಪೂರ-ನಾಂದೇಡ (ರೈಲು ಸಂಖ್ಯೆ: 07093) ಈ ರೈಲು ಡಿಸೆಂಬರ್ ತಿಂಗಳಲ್ಲಿ ದಿನಾಂಕ: 5, 12, 19 ಮತ್ತು 26 ಒಟ್ಟು 4 ಸೋಮುವಾರಗಳಂದು ನಾಂದೇಡ್ ನಿಂದ ಮಧ್ಯಾಹ್ನ 1.35 ಗಂಟೆಗೆ ಹೊರಟು ಪೂರ್ಣ, ಪರಭಾಣಿ, ಲಾತೂರ ರೋಡ್ ಮೂಲಕ ಭಾಲ್ಕಿಗೆ ರಾತ್ರಿ. 7.25ಕ್ಕೆ, ಬೀದರಗೆ ರಾ. 7.50ಕ್ಕೆ, ಹುಮನಾಬಾದಗೆ ರಾ. 8.55ಕ್ಕೆ ತಲುಪಲಿದೆ ಅಲ್ಲಿಂದ ಕಲಬುರಗಿ, ರಾಯಚೂರ, ಹಿಂದುಪೂರ, ಯಲಹಂಕ ಮಾರ್ಗವಾಗಿ ಯಶವಂತಪೂರ ಮರುದಿನ ಮಂಗಳವಾರ ಬೆ. 11.00 ಗಂಟೆಗೆ ತಲುಪಲಿದೆ.
ಯಶವಂತಪೂರ-ನಾಂದೇಡ-ಯಶವಂತಪೂರ (ರೈಲು ಸಂಖ್ಯೆ: 07094) ದಿನಾಂಕ: 6, 13, 20, 27 ಒಟ್ಟು 4 ಮಂಗಳವಾರಗಳಂದು, ಸಾಯಂಕಾಲ 4.15 ಗಂಟೆಗೆ ಯಶವಂತಪೂರನಿಂದ ಹೊರಟು ಬಂದ ಮಾರ್ಗವಾಗಿ ಮರುದಿನ ಬುಧವಾರ ನಸುಕಿನ ಜಾವ ಬೆ. 3.25ಕ್ಕೆ ಹುಮನಾಬಾದ, ಬೆ. 5.00 ಗಂಟೆಗೆ ಬೀದರ ಮತ್ತು ಬೆ. 5.45ಕ್ಕೆ ಭಾಲ್ಕಿಗೆ ತಲುಪಲಿದೆ ನಂತರ ಮಧ್ಯಾಹ್ನ 1.00 ಗಂಟೆಗೆ ನಾಂದೇಡ ತಲುಪಲಿದೆ.