ಕರ್ನಾಟಕ

karnataka

ETV Bharat / state

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ - latest news of bidar

ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲವೆಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

By

Published : Oct 15, 2019, 11:43 PM IST

Updated : Oct 15, 2019, 11:55 PM IST

ಬೀದರ್: ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಸಂಸದರು ಒತ್ತಡ ಹಾಕುವ ಅಗತ್ಯವಿಲ್ಲವೆಂದು ಬೀದರ್ ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ನೆರೆ ಪರಿಹಾರಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಾಗಿಲ್ಲ: ಭಗವಂತ ಖೂಬಾ

ಬೀದರ್​ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಖೂಬಾ, ನೆರೆ ಪರಿಹಾರ ವಿಚಾರದಲ್ಲಿ ಎನ್​​ಡಿಆರ್​ಎಫ್​ ಸಂಸ್ಥೆ ಪರಿಶೀಲನೆ ನಡೆಸಿ ವರದಿ ನೀಡಿದೆ. ಅದರ ಪ್ರಕಾರ ನೆರೆ ಪೀಡಿತ ಪ್ರದೇಶಕ್ಕೆ ಪರಿಹಾರ ಯಾವ ಕ್ಷಣದಲ್ಲಾದರೂ ಬರಬಹುದು. ಕೇಂದ್ರ ಗೃಹ ಸಚಿವ ಹಾಗೂ ರಾಜ್ಯದ ನಾಯಕರು ನೆರೆಯಿಂದಾಗಿರುವ ನಷ್ಟದ ಕುರಿತು ಸಮಗ್ರ ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ನೆರೆ ಸಂತ್ರಸ್ತರ ಪರಿಹಾರ ಧನ ಬಿಡುಗಡೆ ಮಾಡಲು ಕೇಂದ್ರದ ಮೇಲೆ ಒತ್ತಡ ಹಾಕುವ ಅಗತ್ಯವಿಲ್ಲ ಎಂದು ಖೂಬಾ ಹೇಳಿದ್ದಾರೆ.

ರಾಜ್ಯದಿಂದ ಬಿಜೆಪಿಗೆ 25 ಜನ ಸಂಸದ ಆಯ್ಕೆ ಮಾಡಿದ್ದಾರೆ. ಯಾವ ಕ್ಷಣದಲ್ಲಾದರೂ ಅನುದಾನ ಬರಲಿದೆಯೆಂದು ಭರವಸೆ ವ್ಯಕ್ತಪಡಿಸಿದರು.

Last Updated : Oct 15, 2019, 11:55 PM IST

ABOUT THE AUTHOR

...view details