ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್‌ಗೆ 10 ದಿನದಲ್ಲಿ 3 ಬಾರಿ ಕೋವಿಡ್​ ಟೆಸ್ಟ್​.. ಬೀದರ್​ ಆರೋಗ್ಯ ಇಲಾಖೆ ಯಡವಟ್ಟು

ಲ್ಯಾಬ್ ಟೆಕ್ನಿಷಿಯನ್ ಆಗಿರುವ ಶಿವಾನಂದ್‌ ಅವರು ಸೋಂಕಿತರ ಸಂಪರ್ಕದಿಂದ ಕೊರೊನಾ ತಗುಲಿತ್ತು. ನಂತರ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ, ಹತ್ತು ದಿನದಲ್ಲಿ ಮೂರು ಬಾರಿ ಕೊರೊನಾ ಟೆಸ್ಟ್ ಮಾಡಿಸಲು ಹೇಳಿ ಐಸಿಆರ್‌ ನಂಬರ್ (ID NUMBER) ತಪ್ಪಾಗಿ ಕೊಟ್ಟು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಅವಾಂತರ ಸೃಷ್ಠಿಸಿದೆ..

fdff
ಬೀದರ್​ ಆರೋಗ್ಯ ಇಲಾಖೆ ಯಡವಟ್ಟು

By

Published : Aug 8, 2020, 11:43 AM IST

ಬೀದರ್: ಕೊರೊನಾ ವಾರಿಯರ್‌ ಆಗಿರುವ ಲ್ಯಾಬ್ ಟೆಕ್ನಿಷಿಯನ್‌ವೊಬ್ಬರಿಗೆ 10 ದಿನದಲ್ಲಿ ಮೂರು ಬಾರಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಮಾಡಿ ಜಿಲ್ಲಾ ಆರೋಗ್ಯ ಇಲಾಖೆ ಮಹಾ ಯಡವಟ್ಟು ಮಾಡಿದೆ.

ಕಳೆದ 20ರಂದು ಶಿವಾನಂದ್​ ಎಂಬುವರಿಗೆ ಕೊರೊನಾ ಲಕ್ಷಣ ಕಾಣಿಸಿತ್ತು. 21ರಂದು ಟೆಸ್ಟ್ ಮಾಡಿಸಿದಾಗ 23ರಂದು ಪಾಸಿಟಿವ್ ಬಂದ ಕಾರಣ ಮನೆಯಲ್ಲೇ ಐಸೋಲೇಷನ್ ಆಗಿ ಟ್ರೀಟ್​ಮೆಂಟ್ ಪಡೆದಿದ್ದಾರೆ. 27ರಂದು ಆರೋಗ್ಯ ಇಲಾಖೆಯಿಂದ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಎಂದು ಬಂದಿದೆ.

ಆದರೆ, ಮತ್ತೆ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು ಮತ್ತೆ ತಪಾಸಣೆಗೆ ಒಳಗಾಗುವಂತೆ ಹೇಳಿದ್ದಾರೆ. 30ರಂದು ಪರೀಕ್ಷೆ ಮಾಡಿಸಿದಾಗ ಮತ್ತೆ ವರದಿ ಪಾಸಿಟಿವ್ ಬಂದಿದೆ. ಆದರೆ, ಇವರ ಐಸಿಆರ್ ನಂಬರ್ ಬದಲಾಗಿದ್ದರಿಂದ ಗೊಂದಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಶಿವಾನಂದ್​, ನನಗೆ ಕೊರೊನಾದಿಂದ ಯಾವ ಭಯ ಇಲ್ಲ. ಆದರೆ, ಈ ರೀತಿ‌ ಮಾಡುವುದರಿಂದ ಮಾನಸಿಕವಾಗಿ ತುಂಬ ನೊಂದಿದ್ದೇನೆ. ನನ್ನ ಬಿಪಿ ಕೂಡ ಲೋ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ABOUT THE AUTHOR

...view details