ಕರ್ನಾಟಕ

karnataka

ETV Bharat / state

ಬೀದರ್​ ಸ್ಥಳೀಯ ಪತ್ರಿಕೆ‌ ಸಂಪಾದಕನ ಬರ್ಬರ ಹತ್ಯೆ... ಕಾರಣ ನಿಗೂಢ - Bidar crime news

ಬೀದರ್​ನ ವಿಜಯಧ್ವನಿ ಎಂಬ ದಿನ ಪತ್ರಿಕೆಯ ಸಂಪಾದಕರಾದ ರವೀಶ್ ಪಂಡಿತ್(39) ಹತ್ಯೆಯಾದವರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸ್ ಶ್ವಾನದಳದಿಂದ ಹತ್ಯೆಗಾರರ ಶೋಧ ಕಾರ್ಯ ನಡೆದಿದೆ.

ಸ್ಥಳೀಯ ಪತ್ರಿಕೆ‌ ಸಂಪಾದಕನ ಬರ್ಬರ ಹತ್ಯೆ

By

Published : Sep 28, 2019, 6:10 PM IST

Updated : Sep 28, 2019, 6:27 PM IST

ಬೀದರ್: ಸ್ಥಳೀಯ ದಿನ ಪತ್ರಿಕೆ ಸಂಪಾದಕರೊಬ್ಬರನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಮಂಗಲಪೇಟ್ ಹೊರವಲಯದ ನಿರ್ಜನ ಪ್ರದೇಶದಲ್ಲಿ ಮೃತ ದೇಹ ಪತ್ತೆಯಾಗಿದೆ. ಬೀದರ್​ನ ವಿಜಯಧ್ವನಿ ಎಂಬ ದಿನ ಪತ್ರಿಕೆಯ ಸಂಪಾದಕರಾದ ರವೀಶ್ ಪಂಡಿತ್(39) ಹತ್ಯೆಯಾದವರು. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಪೊಲೀಸ್ ಶ್ವಾನದಳದಿಂದ ಶೋಧ ಕಾರ್ಯ ನಡೆದಿದೆ.

ಬೀದರ್​ ಸ್ಥಳೀಯ ಪತ್ರಿಕೆ‌ ಸಂಪಾದಕನ ಬರ್ಬರ ಹತ್ಯೆ

ನಿನ್ನೆ ತಡರಾತ್ರಿ ಹತ್ಯೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ಸ್ಥಳಕ್ಕೆ ಎಸ್​ಪಿ ಟಿ. ಶ್ರೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 28, 2019, 6:27 PM IST

ABOUT THE AUTHOR

...view details