ಕರ್ನಾಟಕ

karnataka

ETV Bharat / state

2 ವರ್ಷ ಕಳೆದ್ರೂ ನಗರಸಭೆ ಪ್ರತಿನಿಧಿಗಳಿಲ್ಲ.. ಸಮಸ್ಯೆಗಳಿಂದ ಹೈರಾಣಾದ ತೆರಿಗೆದಾರರು - corporation election delay

ಕಳೆದ ಎರಡು ವರ್ಷದಲ್ಲಿ 4 ಆಯುಕ್ತರು ಬದಲಾಗಿದ್ದಾರೆ. ಹಲವು ಕಾಮಗಾರಿಗಳು ಸ್ಥಗಿತವಾಗಿವೆ. ಹಳ್ಳಿಖೇಡ್ ಪುರಸಭೆ, ಬಸವಕಲ್ಯಾಣ ನಗರಸಭೆ, ಹುಮನಾಬಾದ್, ಚಿಟಗುಪ್ಪಾ, ಭಾಲ್ಕಿ ಪುರಸಭೆಗಳು, ಔರಾದ್ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದಿವೆ. ಆದರೆ, ಬೀದರ್ ನಗರ ಸಭೆಗೆ ಮಾತ್ರ ಸಕಾಲಕ್ಕೆ ಚುನಾವಣೆ ನಡೆದಿಲ್ಲ..

Municipal elections delayed in bidar
ಸಮಸ್ಯೆಗಳಿಂದ ಹೈರಾಣಾದ ಸಾರ್ವಜನಿಕರು

By

Published : Sep 19, 2020, 5:02 PM IST

ಬೀದರ್: ಶುದ್ಧ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳಿಲ್ಲ, ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಈ ನಗರಸಭೆಯ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದು 2 ವರ್ಷವಾಗುತ್ತಿದೆ. ಇಲ್ಲಿ ಅಧಿಕಾರಿಗಳೇ ತಿಳಿದಂತೆ ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.​

ಸಮಸ್ಯೆಗಳಿಂದ ಹೈರಾಣಾದ ಸಾರ್ವಜನಿಕರು

ಪ್ರಾಮಾಣಿಕವಾಗಿ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂಬ ದೂರು ವ್ಯಾಪಕವಾಗಿವೆ. ಜನರ ಸಮಸ್ಯೆಗಳನ್ನ ಆಲಿಸುವ ಜನಪ್ರತಿನಿಧಿಗಳು ಇಲ್ಲದೆ, ಗಡಿ ಜಿಲ್ಲೆ ಬೀದರ್ ನಗರ ಸಭೆಯ ವ್ಯಾಪ್ತಿಯ ಜನ ಅನಾಥ ಪ್ರಜ್ಞೆಯಲ್ಲಿ ದಿನದೂಡುತ್ತಿದ್ದಾರೆ. 2019 ಮಾರ್ಚ್ ತಿಂಗಳಿನಲ್ಲಿಯೇ ನಗರ ಸಭೆಯ ಅವಧಿ ಪೂರ್ಣಗೊಂಡಿದ್ದು, ಆಗಲೇ ಚುನಾವಣೆ ನಡೆಯಬೇಕಾಗಿತ್ತು. ಆದರೆ, ವಾರ್ಡ್​ವಾರು ಮೀಸಲಾತಿ ಅವೈಜ್ಞಾನಿಕ ಎಂದು ಎರಡು ವಾರ್ಡ್​ಗಳ ನಾಗರಿಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಸಮಸ್ಯೆ ಕೋರ್ಟ್​ನಲ್ಲಿ ಬಗೆ ಹರಿದು, ಮೀಸಲಾತಿ ಕೂಡ ಮಾಡಲಾಗಿದೆ.

ಆದರೆ, ಸರ್ಕಾರ ಮಾತ್ರ ಇನ್ನೂ ಬೀದರ್ ನಗರ ಸಭೆಗೆ ಚುನಾವಣೆ ನಡೆಸಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ನಗರಸಭೆಯೇ ಅಸ್ತಿತ್ವದಲ್ಲಿ ಇಲ್ಲದ ಕಾರಣ, ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕುಡಿಯುವ ನೀರು, ಸ್ವಚ್ಛತೆ, ರಸ್ತೆ ಹೀಗೆ ಸಮಸ್ಯೆಗಳ ಆಗರವೇ ಎದ್ದು ನಿಂತಿದೆ. ನಗರದ ಒಳಚರಂಡಿ ಕಾಮಗಾರಿ ಕೂಡ ಆಮೆಗತಿಯಲ್ಲಿದೆ. ಕುಡಿಯುವ ನೀರು ಬಾರದೆ ಜನ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಎರಡು ವರ್ಷದಲ್ಲಿ ನಾಲ್ವರು ಆಯುಕ್ತರು :ಕಳೆದ ಎರಡು ವರ್ಷದಲ್ಲಿ 4 ಆಯುಕ್ತರು ಬದಲಾಗಿದ್ದಾರೆ. ಹಲವು ಕಾಮಗಾರಿಗಳು ಸ್ಥಗಿತವಾಗಿವೆ. ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾದ ಹಳ್ಳಿಖೇಡ್, ಪುರಸಭೆ, ಬಸವಕಲ್ಯಾಣ ನಗರಸಭೆ, ಹುಮನಾಬಾದ್, ಚಿಟಗುಪ್ಪಾ, ಭಾಲ್ಕಿ ಪುರಸಭೆಗಳು, ಔರಾದ್ ಪಟ್ಟಣ ಪಂಚಾಯತ್ ಗೆ ಚುನಾವಣೆ ನಡೆದಿದೆ. ಆದರೆ, ಬೀದರ್ ನಗರ ಸಭೆಗೆ ಮಾತ್ರ ಸಕಾಲಕ್ಕೆ ಚುನಾವಣೆ ನಡೆದಿಲ್ಲ. ಸರ್ಕಾರ ಯಾವಾಗ ಚುನಾವಣೆ ನಡೆಸುತ್ತದೆ ಎಂಬುದನ್ನು ನೋಡೋಣ. ಅಲ್ಲಿವರೆಗೂ ಜನರ ಸಮಸ್ಯೆಯನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ ಎಂದು ಪೌರಾಯುಕ್ತ ಬಿ.ಬಸಪ್ಪ ಹೇಳಿದರು.

ABOUT THE AUTHOR

...view details