ಬೀದರ್: ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ವೇಳೆ ನಡು ಬೀದಿಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ನಗರಸಭೆ ಸದಸ್ಯ ದೀಪಕ್ ಗುಡ್ಡಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಐಪಿಎಲ್ ಬೆಟ್ಟಿಂಗ್: ಬಸವಕಲ್ಯಾಣದಲ್ಲಿ ನಗರಸಭಾ ಸದಸ್ಯ ಸೇರಿ ಇಬ್ಬರ ಬಂಧನ - IPL 2020
ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ನಗರಸಭಾ ಸದಸ್ಯ ಸೇರಿ ಇಬ್ಬರನ್ನು ಬಂಧಿಸಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದಿದೆ.
ಬಸವಕಲ್ಯಾಣದಲ್ಲಿ ನಗರಸಭಾ ಸದಸ್ಯ ಸೇರಿ ಇಬ್ಬರ ಬಂಧನ
ಜಿಲ್ಲೆಯ ಬಸವಕಲ್ಯಾಣ ನಗರದ ತ್ರಿಪೂರಾಂತ ಮಡಿವಾಳ ವೃತ್ತದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ದೀಪಕ್ ಗುಡ್ಡಾ ಹಾಗೂ ಅಕ್ತರ ಪಾಷಾ ಎಂಬುವವರು ಬೆಟ್ಟಿಂಗ್ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಿಂದ 30,120 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ.
ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು, ಈ ಕುರಿತು ಬಸವಕಲ್ಯಾಣ ಠಾಣೆಯಲ್ಲಿ ಕಲಂ 78(6) ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.