ಬಸವಕಲ್ಯಾಣ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಹಾನಿಗೀಡಾದ ಪ್ರದೇಶಕ್ಕೆ ಸಂಸದ ಭಗವಂತ ಖೂಬಾ ಭೇಟಿ ನೀಡಿ, ವೀಕ್ಷಿಸಿದರು.
ತಾಲೂಕಿನ ಖೇರ್ಡಾ(ಕೆ) ಗ್ರಾಮಕ್ಕೆ ಭೇಟಿ ನೀಡಿ ಹಾಳಾದ ಬೆಳೆಯನ್ನು ವೀಕ್ಷಿಸಿ, ಸರ್ಕಾರ ನಿಮ್ಮೊಂದಿಗಿದೆ ಎಂದು ರೈತರಿಗೆ ಧೈರ್ಯ ತುಂಬಿದರು. ಖೇರ್ಡಾ (ಕೆ) ಗ್ರಾಮದಿಂದ ಆಳಂದ ತಾಲೂಕಿನ ಲೆಂಗಟಿ ಗ್ರಾಮಕ್ಕೆ ಸಂಪರ್ಕಿಸುವ ಬ್ರಿಡ್ಜ್ ನಿರ್ಮಿಸಿ ಎಂದು ಇದೇ ವೇಳೆ ಗ್ರಾಮಸ್ಥರು ಮನವಿ ಮಾಡಿದರು. ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಂಸದರು ಭರವಸೆ ನೀಡಿದರು.
ಅತಿವೃಷ್ಟಿಯಾದ ಪ್ರದೇಶಗಳಿಗೆ ಸಂಸದ ಭಗವಂತ ಖೂಬಾ ಭೇಟಿ, ಪರಿಶೀಲನೆ ಮುಚಳಂಬ ಗ್ರಾಮದ ಸಮೀಪದ ಚುಳಕಿನಾಲಾ ಡ್ಯಾಂಗೆ ಭೇಟಿ ನೀಡಿ, ಜಲಾಶಯ ವಿಕ್ಷಣೆ ಮಾಡಿದ ಸಂಸದರು, ಅಧಿಕಾರಿಗಳಿಂದ ಮಾಹಿತಿ ಪಡೆದರು. ಹಾಳಾದ ಬೆಳೆ ವಿವರ, ಮನೆಗಳ ವಿವರ, ಜಿವಹಾನಿ, ಪ್ರಾಣಿಹಾನಿ ಎಲ್ಲಾ ಮಾಹಿತಿಯನ್ನು ಕೂಡಲೇ ಸರ್ಕಾರಕ್ಕೆ ವರದಿ ನೀಡಿ, ನನ್ನ ಗಮನಕ್ಕೆ ತನ್ನಿ. ಆದಷ್ಟೂ ಬೇಗ ಸರ್ಕಾರದಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗವುದು ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರೈತರ ಪರ ಸರ್ಕಾರವಾಗಿದ್ದು, ರೈತರಿಗಾಗಿ, ಬಡವರಿಗಾಗಿ, ದಿನದಲಿತರಿಗಾಗಿ ಮಿಸಲಿರುವ ಸರ್ಕಾರವಿದ್ದು, ಯಾರೊಬ್ಬರು ಹೆದರುವ ಅವಶ್ಯಕತೆ ಇಲ್ಲವೆಂದು ಜನರಿಗೆ ಧೈರ್ಯ ತುಂಬಿದರು.