ಕರ್ನಾಟಕ

karnataka

ETV Bharat / state

ಬಾನಂಗಳದಲ್ಲಿ ಪತಂಗ ಹಾರಿಸಿದ ಸಂಸದ ಭಗವಂತ ಖೂಬಾ - ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

ಎಳ್ಳು ಅಮವಾಸ್ಯೆ ಹಿನ್ನೆಲೆ ಸಂಸದ ಭಗವಂತ ಖೂಬಾ ಬಾನಂಗಳದಲ್ಲಿ ಪತಂಗ ಹಾರಿಸಿ ಸಂಭ್ರಮಿಸಿದ್ರು.

kite
ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

By

Published : Dec 25, 2019, 11:00 PM IST

ಬೀದರ್: ಎಳ್ಳು ಅಮವಾಸ್ಯೆ ಪ್ರಯುಕ್ತ ಆಕಾಶದಲ್ಲಿ ಪತಂಗ ಹಾರಿಸಿ ಬೀದರ್ ಸಂಸದ ಭಗವಂತ ಖೂಬಾ ಖುಷಿಪಟ್ರು.

ನಗರ ಹೊರವಲಯದ ಬಕ್ಕಚೌಡಿ ಗ್ರಾಮದ ಗದ್ದೆಯಲ್ಲಿ ಕುಟುಂಬ ಸಮೇತವಾಗಿ ಎಳ್ಳು ಅಮವಾಸ್ಯೆ ನಿಮಿತ್ತ ವಿಶೇಷ ಪೂಜೆ ಮಾಡಿದ್ರು. ನಂತರ ಸಂಸದರು ಮಕ್ಕಳೊಂದಿಗೆ ದಾರವನ್ನು ಎಳೆಯುತ್ತ ಮೈ ಮರೆತು ಕೆಲಕಾಲ ಪತಂಗ ಹಾರಿಸುವ ಮೂಲಕ ಸಾಂಪ್ರದಾಯಿಕ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.

ಆಕಾಶದಲ್ಲಿ ಗಾಳಿಪಟ ಹಾರಿಸಿದ ಸಂಸದ

ನಂತರ ಭಜ್ಜಿ ರೊಟ್ಟಿ ಊಟ ಸವಿದು ಸಂಬಂಧಿಕರು, ಆಪ್ತರೊಂದಿಗೆ ಹರಟೆ ಹೊಡೆದು ಸಿಕ್ಕಾಪಟ್ಟೆ ಒತ್ತಡದ ನಗರ ಜಂಜಾಟದ ಜೀವನ ಮರೆತು ಒಂದು ದಿನದ ಮಟ್ಟಿಗೆ ಅನ್ನದಾತನ ಅಂಗಳದಲ್ಲಿ ರೈತರ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ABOUT THE AUTHOR

...view details