ಬೀದರ್: ಅಧಿಕಾರ ದುರ್ಬಳಕೆ ಹಾಗೂ ದಬ್ಬಾಳಿಕೆ ಮೂಲಕ ಭಾಲ್ಕಿ ವಿಧಾನಸಭೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಅಕ್ರಮವಾಗಿ 26,000 ಮನೆಗಳ ಹಂಚಿಕೆ ಮಾಡಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರು ತಮ್ಮ ಎರಡೂ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಾರ್ವಜನಿಕ ಜೀವನದಿಂದ ನಿವೃತ್ತಿಯಾಗಬೇಕು ಎಂದು ಸಂಸದ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, 2015 ರಿಂದ 2019 ರವರೆಗೆ ಭಾಲ್ಕಿ ಕ್ಷೇತ್ರದಲ್ಲಿ ಈಶ್ವರ ಖಂಡ್ರೆ ಅವರು ಬೊಗಸ್ ಫಲಾನುಭವಿಗಳಿಗೆ ತಮ್ಮ ಮನೆಯಲ್ಲೇ ಹಕ್ಕು ಪತ್ರಗಳನ್ನು ಪ್ರಿಂಟ್ ಮಾಡಿ ಸಾಮೂಹಿಕವಾಗಿ ಹಂಚಿಕೆ ಮಾಡಿದ್ದಾರೆ. ಸರ್ಕಾರದ ಸಚಿವರಾಗಿದಕ್ಕೆ ಆ ಎಲ್ಲ ಫಲಾನುಭವಿಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ 91 ಕೋಟಿ ರುಪಾಯಿ ನಷ್ಟವಾಗಿದ್ದು, ಈ ನಷ್ಟ ಖುದ್ದು ಈಶ್ವರ ಖಂಡ್ರೆ ಅವರೇ ಭರಿಸಬೇಕು ಎಂದು ಖೂಬಾ ಒತ್ತಾಯಿಸಿದ್ದಾರೆ.