ಬೀದರ್ :ರಮೇಶ್ ಜಾರಕಿಹೊಳಿಸಿಡಿ ಪ್ರಕರಣದ ತನಿಖೆ ಚುರುಕಗೊಳಿಸಿದ ವಿಶೇಷ ತನಿಖಾ ದಳ (ಎಸ್ಐಟಿ) ಜಿಲ್ಲೆಯ ನಾಲ್ವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. "ನನ್ನ ಮಗ ನಿರಪರಾಧಿ, ನಾವು ಅಮಾಯಕರು ದಯವಿಟ್ಟು ನನ್ನ ಮಗನನ್ನು ಬಿಟ್ಟು ಬಿಡಿ ಎಂದು ಯುವಕನೊಬ್ಬನ ತಾಯಿ ಕಣ್ಣೀರು ಹಾಕಿದ್ದಾರೆ.
ವಶಕ್ಕೆ ಪಡೆದ ನಾಲ್ವರ ಪೈಕಿ, ಸಾಗರ ಸಿಂಧೆ ಎಂಬಾತನ ತಾಯಿ ಮತ್ತು ಸಹೋದರಿ ಕಣ್ಣೀರು ಹಾಕಿದ್ದು, ನಮ್ಮ ಮಗ ಅಮಾಯಕ. ಬಡ ಮಕ್ಕಳ ಪರ ಕೆಲಸ ಮಾಡಿಕೊಂಡು ಬಂದಿದ್ದಾನೆ. ನಮಗೆ ಅವನನ್ನು ಬಿಟ್ಟರೆ ಯಾರೂ ಇಲ್ಲ ಎಂದು ಎಂದಿದ್ದಾರೆ.