ಕರ್ನಾಟಕ

karnataka

ETV Bharat / state

ಅಮ್ಮನ ಸಾವಿನ ಸುದ್ದಿ ಕೇಳಿ ಪುತ್ರನಿಗೆ ಹೃದಯಾಘಾತ: ಬೀದರ್‌ನಲ್ಲಿ ಒಂದೇ ದಿನ ತಾಯಿ-ಮಗ ಸಾವು - ಬೀದರ್​ನಲ್ಲಿ ತಾಯಿ ಮಗ ಸಾವು

ಅಮ್ಮನ ಸಾವಿನ ಸುದ್ದಿ ಕೇಳಿದ ಪುತ್ರನಿಗೂ ಹೃದಯಾಘಾತವಾಗಿ ಒಂದೇ ದಿನ ತಾಯಿ-ಮಗ ಇಬ್ಬರೂ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮದಲ್ಲಿ ನಡೆದಿದೆ.

mother and son died at bidar
ಬೀದರ್​ನಲ್ಲಿ ತಾಯಿ-ಮಗ ಸಾವು

By

Published : Dec 7, 2021, 1:38 PM IST

ಬಸವಕಲ್ಯಾಣ (ಬೀದರ್​):ತಾಯಿಯ ಸಾವಿನ ಸುದ್ದಿ ಕೇಳಿದ ಪುತ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮದಲ್ಲಿಂದು ಜರುಗಿದೆ. ಗ್ರಾಮದ ಜೀಜಾಬಾಯಿ ಪಾಟೀಲ್(96) ಹಾಗೂ ಮನೋಹರ್ ರೆಡ್ಡಿ ಪಾಟೀಲ್ (75) ಮೃತಪಟ್ಟವರು.

ಜೀಜಾಬಾಯಿ ಅವರು ವಯೋಸಹಜ ಕಾಯಿಲೆಯಿಂದ ಇಂದು ನಸುಕಿನ ಜಾವ ಮೃತಪಟ್ಟದ್ದಾರೆ. ಬೆಳಗ್ಗೆ ಈ ಸುದ್ದಿ ಕೇಳಿದ ಪುತ್ರ ಮನೋಹರ್ ರೆಡ್ಡಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಬಸವಕಲ್ಯಾಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳಿಂದ ತಿಳಿಸಿವೆ.

ಇದನ್ನೂ ಓದಿ:ಮೈಸೂರಿನಲ್ಲಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿ ಬಲಿ, ಬಸ್​ಗೆ​​ ಡಿಕ್ಕಿಯಾಗಿ ಸ್ಕೂಟರ್​ ಸವಾರ ಸಾವು!

ತಾಯಿ ಮಗ ಒಂದೇ ದಿನ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂದ ಸದಸ್ಯರು ಹಾಗೂ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.

ABOUT THE AUTHOR

...view details