ಬಸವಕಲ್ಯಾಣ: ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾದ ಘಟನೆ ತಾಲೂಕಿನ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆಕಸ್ಮಿಕ ಬೆಂಕಿ: 300 ಕ್ಕೂ ಅಧಿಕ ಮಾವಿನ ಮರಗಳು ಭಸ್ಮ - 300 ಕ್ಕೂ ಅಧಿಕ ಮಾವಿನ ಮರಗಳು ಭಸ್ಮ
ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ 7 ಎಕರೆ ಜಮೀನಿನಲ್ಲಿದ್ದ 630 ಮಾವಿನ ಮರಗಳ ಪೈಕಿ 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.
![ಆಕಸ್ಮಿಕ ಬೆಂಕಿ: 300 ಕ್ಕೂ ಅಧಿಕ ಮಾವಿನ ಮರಗಳು ಭಸ್ಮ ಮಾವಿನ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿ](https://etvbharatimages.akamaized.net/etvbharat/prod-images/768-512-10973489-thumbnail-3x2-lek.jpg)
ಮಾವಿನ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿ
ಮಾವಿನ ತೋಟಕ್ಕೆ ತಗುಲಿದ ಆಕಸ್ಮಿಕ ಬೆಂಕಿ
ಹಳ್ಳಿ ಗ್ರಾಮದ ಮಹಾಲಿಂಗ ರಾಮಚಂದ್ರ ಬಿರಾದಾರ ಎನ್ನುವರಿಗೆ ಸೇರಿದ ಮಾವಿನ ತೋಟಕ್ಕೆ ಬೆಂಕಿ ತಗುಲಿದ್ದು, ಒಟ್ಟು 7 ಎಕರೆ ಜಮೀನಿನಲ್ಲಿದ್ದ 630 ಮಾವಿನ ಮರಗಳ ಪೈಕಿ, 300 ಕ್ಕೂ ಅಧಿಕ ಮಾವಿನ ಮರಗಳು ಬೆಂಕಿಗೆ ಆಹುತಿಯಾಗಿವೆ.
ಇನ್ನು ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕಾರ್ಯಪ್ರವರ್ತರಾಗಿ ಬೆಂಕಿ ನಂದಿಸುವ ಮೂಲಕ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. ಘಟನೆಯಿಂದಾಗಿ ಸುಮಾರು 3 ಲಕ್ಷಕ್ಕೂ ಅಧಿಕ ರೂ. ಮೌಲ್ಯದ ಹಾನಿ ಸಂಭವಿಸಿದೆ ಎಂದು ತಿಳಿದು ಬಂದಿದೆ.