ಬಸವಕಲ್ಯಾಣ: ಮೊಬೈಲ್ ಟವರ್‌ನ ಬ್ಯಾಟರಿ ಕಳವು ಮಾಡಿದ ಘಟನೆ ತಾಲೂಕಿನ ಉಜಳಂಬ ಗ್ರಾಮದಲ್ಲಿ ನಡೆದಿದೆ.
ಮೊಬೈಲ್ ಟವರ್‌ನ ಬ್ಯಾಟರಿ ಎಗರಿಸಿದ ಕಳ್ಳರು - Mobile Tower's Battery theft
ಬಸವಕಲ್ಯಾಣದ ಹೊರ ವಲಯದಲ್ಲಿರುವ ಬಿಎಸ್‌ಎನ್‌ಎಲ್‌ನ ಮೊಬೈಲ್ ಟವರ್ನಲ್ಲಿ ಬ್ಯಾಟರಿ ಕಳವು ಮಾಡಿದ್ದಾರೆ.

ಟಾವರ್‌ನ ಬ್ಯಾಟರಿ ಎಗರಿಸಿದ ಕಳ್ಳರು.
ಗ್ರಾಮದ ಹೊರ ವಲಯದಲ್ಲಿರುವ ಬಿಎಸ್‌ಎನ್‌ಎಲ್‌ನ ಮೊಬೈಲ್ ಟವರ್ನಲ್ಲಿ ಅಳವಡಿಸಲಾಗಿದ್ದ ಸುಮಾರು 50 ಸಾವಿರ ರೂ. ಮೌಲ್ಯದ 24 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ.
ಈ ಕುರಿತು ಮಂಠಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಸಿಪಿಐ ಮಹೇಶಗೌಡ ಪಾಟೀಲ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.