ಕರ್ನಾಟಕ

karnataka

ETV Bharat / state

ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿದ್ದೆಗೆ ಜಾರಿದ ಎಂಎಲ್ಎ ನಾರಾಯಣರಾವ್! - ಶಾಸಕ ಬಿ.ನಾರಾಯಣರಾವ್ ನಿದ್ದೆ ಮಾಡಿ ಚರ್ಚೆಗೆ ಗ್ರಾಸವಾದರು

ಬೀದರ್ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ನಿದ್ದೆ ಮಾಡಿ ಚರ್ಚೆಗೆ ಗ್ರಾಸವಾದರು.

ನಾರಾಯಣರಾವ್
ನಾರಾಯಣರಾವ್

By

Published : Nov 29, 2019, 7:36 PM IST

ಬೀದರ್: ಹಳ್ಳಿಗಳ ಜ್ವಲಂತ ಸಮಸ್ಯೆಗಳು, ಪರಿಹಾರಕ್ಕಾಗಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಗಂಭೀರವಾಗಿ ಚರ್ಚೆ ನಡೆಯುತ್ತಿರುವ ಸಭೆಯಲ್ಲಿ ಬಸವಕಲ್ಯಾಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾರಾಯಣರಾವ್ ಗಡದ್ ನಿದ್ದೆಗೆ ಜಾರಿದ್ದು ಸಾಕಷ್ಟು ಸದ್ದು ಮಾಡಿದೆ.

ನಗರದ ಜಿಲ್ಲಾ ಪಂಚಾಯತ್‌ ಆವರಣದಲ್ಲಿ ಪಂಚಾಯತ್​ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ 15 ನಿಮಿಷಕ್ಕೂ ಅಧಿಕ ಕಾಲ ಶಾಸಕ ಬಿ.ನಾರಾಯಣರಾವ್ ನಿದ್ರಾಲೋಕದಲ್ಲಿ ತೇಲಾಡಿದರು‌.

ಸಭೆಯಲ್ಲಿ ನಿದ್ದೆಗೆ ಜಾರಿದ ಎಂಎಲ್ಎ ನಾರಾಯಣರಾವ್..

ಜಿಲ್ಲೆಯ ಗಂಭೀರ ವಿಷಯದ ಮೇಲೆ ಚರ್ಚೆ ನಡೆಯುತ್ತಿರುವಾಗ ಶಾಸಕರು ತುಂಬಿದ ಸಭೆಯಲ್ಲಿ ನಿದ್ರಾವಸ್ಥೆಗೆ ಜಾರಿಕೊಂಡರು. ಈ ವೇಳೆ ಸಭೆಯಲ್ಲಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳ ಗುಸು ಗುಸು ಚರ್ಚೆಗೆ ಕಾರಣವಾಯಿತು.

ABOUT THE AUTHOR

...view details