ಕರ್ನಾಟಕ

karnataka

ETV Bharat / state

ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ ಬಿ. ನಾರಾಯಣರಾವ್ - ಶಾಸಕ ಬಿ ನಾರಾಯಣರಾವ ಲೆಟೆಸ್ಟ್ ನ್ಯೂಸ್

ಪರ್ತಾಪೂರ ಗ್ರಾಮದಿಂದ ತಾಂಬೋಳ ಮಾರ್ಗದ ಸುಮಾರು 2 ಕಿ.ಮೀ (ಗಡಿ ವರೆಗೆ) ರಸ್ತೆ ಅಗಲೀಕರಣ ಮತ್ತು ಸುಧಾರಣೆ ಕಾಮಗಾರಿಗೆ ಇಂದು ಶಾಸಕ ಬಿ. ನಾರಾಯಣರಾವ್ ಚಾಲನೆ ನೀಡಿದರು.

Drive to road work
Drive to road work

By

Published : Aug 16, 2020, 10:09 PM IST

ಬಸವಕಲ್ಯಾಣ: ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ಹಳ್ಳಿಗಳ ಪ್ರಗತಿ ಸಾಧ್ಯವಿದ್ದು, ತಾಲೂಕಿನ ಎಲ್ಲಾ ಗ್ರಾಮಗಳಿಗೂ ಪಕ್ಕಾ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಬಿ. ನಾರಾಯಣರಾವ್ ಹೇಳಿದರು.

ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿರುವ ಪರ್ತಾಪೂರ ಗ್ರಾಮದಿಂದ ತಾಂಬೋಳ ಮಾರ್ಗದ ಸುಮಾರು 2 ಕಿ.ಮೀ (ಗಡಿ ವರೆಗೆ) ರಸ್ತೆ ಅಗಲೀಕರಣ ಮತ್ತು ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. 1.56 ಕೋಟಿ ರೂ. ವೆಚ್ಚದಲ್ಲಿ 5.50 ಮೀಟರ್ ಅಗಲೀಕರಣಗೊಳಿಸಿ ಈ ರಸ್ತೆ ನಿರ್ಮಿಸಲಾಗುತ್ತಿದೆ. ಅವಧಿಗೂ ಮುನ್ನ ಅಂದರೆ ಎರಡು ತಿಂಗಳಲ್ಲಿ ಈ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದರು.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಅಂತರ್ಜಲ ಹೆಚ್ಚಿಸುವಲ್ಲಿ ಪೂರಕ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುತ್ತಿದೆ. ರಸ್ತೆ, ನೀರು, ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ತಾಲೂಕಿನಲ್ಲಿನ ಹಳೆ ಕೆರೆಗಳ ಪುನಶ್ಚೇತನ, ಹೊಸ ಕೆರೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಶೈಕ್ಷಣಿಕ ಪ್ರಗತಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಶೈಕ್ಷಣಿಕ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ. ಅಗತ್ಯವಿರುವ ಕಡೆ ಹೊಸ ಶಾಲಾ ಕೋಣೆಗಳು, ಕಾಂಪೌಂಡ್, ಕುಡಿಯುವ ನೀರು ಸೇರಿದಂತೆ ಇತರೆ ಸೌಲಭ್ಯಗಳಿಗೆ ಒತ್ತು ನೀಡಲಾಗುತ್ತಿದೆ ಎಂದರು.

ಹರ್ಷ: ಪರ್ತಾಪೂರ ಗ್ರಾಮದಿಂದ ಮಹಾರಾಷ್ಟ್ರದ ತಾಂಬೋಳ ಮಾರ್ಗದ ರಸ್ತೆಯು ಹದಗೆಟ್ಟ ಪರಿಣಾಮ ಈ ಮಾರ್ಗದಿಂದ ಸಂಚರಿಸುವ ವಾಹನ ಸವಾರರು ಮತ್ತು ಹೊಲಗಳಿಗೆ ಹೋಗುವ ರೈತರು ಸಮಸ್ಯೆ ಎದುರಿಸುತ್ತಿದ್ದರು. ಆದರೆ ಜನರ ಸಮಸ್ಯೆಗೆ ಸ್ಪಂದಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿರುವ ಶಾಸಕರ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದಿಸಿ, ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಜಿಪಂ ಸದಸ್ಯ ಅಣ್ಣಾರಾವ ರಾಠೋಡ, ತಾಪಂ ಸದಸ್ಯ ರಾಜು ಢೋಲೆ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ ಕಾಂಬಳೆ, ಎಇಇ ಜಗನ್ನಾಥ ಮಜಗೆ, ಜೆಇ ನಸರುಲ್ಲಾ, ಗುತ್ತಿಗೆದಾರ ಸಿದ್ರಾಮ ಬಿರಾದಾರ, ರಾಜನ್ ಚೌಧರಿ, ದಾವುದ್ ಮಂಠಾಳ, ಮನೋಜ ಮಾಶೇಟ್ಟಿ, ಶರಣು ಆಲಗೂಡ, ಗಿರೀಶ ತಾಂಬೋಳೆ ಸೇರಿದಂತೆ ಇತರರಿದ್ದರು.

ABOUT THE AUTHOR

...view details