ಬೀದರ್: ಕೋವಿಡ್-19 ಸೋಂಕಿನಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೇಗ ಗುಣಮುಖರಾಗಿ ಬರಲೆಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕುಟುಂಬಸ್ಥರು ತಮ್ಮೂರಿನ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ನೆರವೇರಿಸಿದರು.
ಜಿಲ್ಲೆಯ ಔರಾದ್ ತಾಲೂಕಿನ ಬೊಂತಿ ಘಮಸುಬಾಯಿ ತಾಂಡದಲ್ಲಿ ಸಂತ ಸೇವಾಲಾಲ್ ಹಾಗೂ ಜಗದಂಬಾ ಮಾತಾ ಸನ್ನಿಧಿಯಲ್ಲಿ ಸಿಎಂ ಬಿಎಸ್ ವೈ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೇಗ ಗುಣಮುಖರಾಗಿ ಕೊರೊನಾ ಗೆದ್ದು ಬರಲಿ ಎಂದು ಹಾರೈಸಿದ್ದಾರೆ.
ಸಚಿವ ಪ್ರಭು ಚವ್ಹಾಣ ಕುಟುಂಬಸ್ಥರಿಂದ ಹೋಮ ಸಚಿವರಿಗೆ ಪತ್ನಿ ಸಕುಬಾಯಿ, ಪುತ್ರ ಪ್ರತೀಕ ಹಾಗೂ ಪುತ್ರಿ ಪ್ರೀಯಾಂಕ ಚವ್ಹಾಣ ಅವರು ಹೋಮ ನಡೆಸಿ ದೇವರಲ್ಲಿ ಪ್ರಾಥನೆ ಮಾಡಿದ್ದಾರೆ.
ಲಂಬಾಣಿ ಸಮುದಾಯದಿಂದ ಸಾಮೂಹಿಕ ಹೋಮ:
ಕೊರೊನಾ ಅಟ್ಟಹಾಸ ಆರಂಭವಾದಾಗಿನಿಂದಲು ಔರಾದ್ ವಿಧಾನಸಭೆ ಕ್ಷೇತ್ರದ ಲಂಬಾಣಿ ಸಮುದಾಯ ಎಲ್ಲಾ ತಾಂಡಗಳಲ್ಲಿ ಸಾಮೂಹಿಕವಾಗಿ ಹೋಮ ಹವನ ವಿಶೇಷ ಪೂಜೆ ಮಾಡುವ ಮೂಲಕ ಲೋಕ ಕಲ್ಯಾಣಕ್ಕಾಗಿ ಹರಸಲಾಗಿತ್ತು. ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರಿಗೆ ಒಕ್ಕರಿಸಿದ ಸೋಂಕು ತೊಲಗಲಿ ಎಂದು ಸಮುದಾಯದ ಧರ್ಮಗುರು ಸಂತ ಸೇವಾಲಾಲ್ ಹಾಗೂ ಆದಿ ಶಕ್ತಿ ಮಾತೆ ಜಗದಂಬಾ ಮಾತೆ ಮೊರೆ ಹೋಗಿದ್ದಾರೆ. ಕ್ಷೇತ್ರದಲ್ಲಿ ಮುಂದಿನ ಮೂರು ದಿನಗಳ ಕಾಲ ಸಮಾಜದಿಂದ ಸಾಮೂಹಿಕ ಹೋಮ ಮಾಡುವ ಮೂಲಕ ಪ್ರಾಥನೆ ಮಾಡಲಾಗ್ತಿದೆ ಎನ್ನಲಾಗಿದೆ.
ಏನಿದು ಹೋಮ:
ಲಂಬಾಣಿ ಸಮುದಾಯದ ಪವಿತ್ರ ಧಾರ್ಮಿಕ ಅಚರಣೆಗಳಲ್ಲಿ ಒಂದಾದ ಹೋಮ ಇದಾಗಿದೆ. ಸಂಕಷ್ಟದ ಘಳಿಗೆಯಲ್ಲಿ ಸಂತ ಸೇವಾಲಾಲ್ ಹಾಗೂ ಜಗದಂಬಾ ಮಾತೆಯ ಸನ್ನಿಧಿಯಲ್ಲಿ ಹೊಗ್ತಾರೆ. ಚಂದನದ ಕಟ್ಟಿಗೆಯಲ್ಲಿ ತುಪ್ಪ ಬೆರೆಸಿ ಅಗ್ನಿ ಸ್ಪರ್ಷ ಮಾಡಿ ಹವನ ಮಾಡುವುದು. ಈ ವೇಳೆಯಲ್ಲಿ ಕುಟುಂವಸ್ಥರೆಲ್ಲರು ಸೇರಿಕೊಂಡು ಸೇವಾಲಾಲ್ ಸ್ಥೂತಿ ಸಾಮೂಹಿಕವಾಗಿ ಹೇಳುವ ಮೂಲಕ ಆರಾಧಿಸಲಾಗುತ್ತೆ.