ಬೀದರ್ :ವಿಶೇಷ ಚೇತನ ಮಹಿಳೆಯೊಬ್ಬರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಹೊಲಿಗೆ ಯಂತ್ರ ನೀಡಿ ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಬಳಿ ಮನವಿ ಮಾಡಿದ್ದಕ್ಕೆ, ಸ್ಥಳದಲ್ಲೇ ಹೊಲಿಗೆ ಯಂತ್ರ ಕೊಡಿಸುವ ಮೂಲಕ ಮಹಿಳೆಗೆ ಸಹಾಯ ಮಾಡಿದ್ದಾರೆ.
ವಿಶೇಷಚೇತನ ಮಹಿಳೆ ಸ್ವಾವಲಂಬಿ ಬದುಕಿಗೆ ಸಾಥ್ ನೀಡಿದ ಸಚಿವ ಪ್ರಭು ಚೌಹಾಣ್ !!
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರು ಕೇಂದ್ರ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಕರ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಹೋಗಿ ವಿತರಿಸಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ, ಒಲ್ಡ್ ಸಿಟಿ ನಿವಾಸಿ ನಜ್ಮಾ ಎಂಬುವರು ತನಗೆ ಸಹಾಯ ಮಾಡಿ. ಎಷ್ಟೋ ಬಾರಿ ಅರ್ಜಿ ಹಾಕಿದ್ದೇನೆ. ಆದರೆ, ಯಾವ ಅಧಿಕಾರಿಯೂ ತನ್ನ ಮನವಿಯನ್ನು ಪರಿಗಣಿಸಿಲ್ಲ ಎಂದು ಸಚಿವರ ಬಳಿ ವಿನಂತಿಸಿಕೊಂಡಿದ್ದಾರೆ. ಇದನ್ನು ಆಲಿಸಿದ ಸಚಿವರು ಸ್ಥಳದಲ್ಲೇ ಅಧಿಕಾರಿಯನ್ನು ಕರೆಸಿ ಹೊಲಿಗೆ ಯಂತ್ರ ಕೊಡಬೇಕು. ಅಗತ್ಯ ದಾಖಲೆಗಳನ್ನು ಆಮೇಲೆ ಪಡೆದರಾಯ್ತು, ಯಾವುದೇ ಕಾರಣಕ್ಕೂ ಅಸಹಾಯಕರನ್ನು ಕಡೆಗಾಣಿಸಬೇಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೇಂದ್ರ ಸರ್ಕಾರದ ಸಾಧನೆಗಳ ಪ್ರಚಾರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಅವರು ಕೇಂದ್ರ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಕರ ಪತ್ರಗಳನ್ನು ಜನರ ಮನೆ ಬಾಗಿಲಿಗೆ ಹೋಗಿ ವಿತರಿಸಿದರು. ಜಿಲ್ಲೆಯ ಔರಾದ್ ಪಟ್ಟಣ, ಸಂತಪೂರ್ ಹಾಗೂ ಕೌಠಾ ಗ್ರಾಮದಲ್ಲಿ ಸಂಚರಿಸಿ ಮನೆ ಮನೆಗೆ ತೆರಳಿ ಸರ್ಕಾರದ ಸಾಧನೆಗಳ ಕುರಿತು ಪ್ರಚಾರ ನಡೆಸಿದರು.