ಕರ್ನಾಟಕ

karnataka

ETV Bharat / state

ಕೊರೊನಾದಿಂದ ಗುಣಮುಖರಾದ ಸಚಿವ ಪ್ರಭು ಚವ್ಹಾಣ - Minister Prabhu Chavana

ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

Minister Prabhu Chavana
ಸಚಿವ ಪ್ರಭು ಚವ್ಹಾಣ

By

Published : Sep 14, 2020, 11:19 PM IST

ಬೀದರ್: ಕಳೆದ ಒಂದು ವಾರದಿಂದ ಕೊವಿಡ್-19 ಸೋಂಕಿಗೊಳಗಾಗಿದ್ದ ಜಿಲ್ಲಾ ಉಸ್ತುವಾರಿ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಬೆಂಗಳೂರು ಪ್ರವಾಸದ ವೇಳೆಯಲ್ಲಿ ಸೋಂಕು ಧೃಡವಾಗಿತ್ತು. ವೈದ್ಯರ ಸಲಹೆಯಂತೆ ಮನೆಯಲ್ಲೆ ಚಿಕಿತ್ಸೆ ಪಡೆದು ಇಂದು ಬ್ರೀಮ್ಸ್ ಆಸ್ಪತ್ರೆಯಲ್ಲಿ ಮತ್ತೊಮ್ಮೆ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿದಾಗ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ತಿಳಿಸಿದ್ದಾರೆ.

ಗುಣಮುಖರಾದ ಸಚಿವ ಪ್ರಭು ಚವ್ಹಾಣ
ಕೊವಿಡ್-19 ಬಗ್ಗೆ ಮಾಹಿತಿ

ಜಿಲ್ಲೆಯಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು ಇಂದು 51 ಜನರಿಗೆ ಸೋಂಕು ತಗುಲಿದ್ದು 107 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೆ ಇಬ್ಬರು ಸಾವನಪ್ಪಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,495ಕ್ಕೆ ಏರಿಕೆಯಾಗಿದ್ದು 4,758 ಜನರು ಗುಣಮುಖರಾಗಿದ್ದಾರೆ. 145 ಜನರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details