ಕರ್ನಾಟಕ

karnataka

ETV Bharat / state

ರಸ್ತೆ ಪಕ್ಕ ಹಣ್ಣು ಖರೀದಿಸಿದ ಸಚಿವರು... ಮಹಿಳಾ ವ್ಯಾಪಾರಿಯ ಸಮಸ್ಯೆ ಆಲಿಸಿದ ಚವ್ಹಾಣ್​! - ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್​ ಅವರು ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಹಣ್ಣು ಮಾರುತ್ತಿದ್ದ ಮಹಿಳೆ ಬಳಿ ಸೀಬೆಹಣ್ಣು ಖರೀದಿಸಿದರು. ಇದೇ ವೇಳೆ ಆ ಮಹಿಳೆಯ ಸಮಸ್ಯೆ ಆಲಿಸಿದರು.

Prabhu chavan was buy fruits near a road
ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

By

Published : Jan 3, 2020, 8:01 AM IST

Updated : Jan 3, 2020, 2:59 PM IST

ಬೀದರ್:ಕಾರಿನಲ್ಲಿ ಹೊರಟಿದ್ದ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ರಸ್ತೆ ಬದಿ ವ್ಯಾಪಾರ ಮಾಡ್ತಿದ್ದ ಮಹಿಳೆ ಬಳಿ ಸೀಬೆಹಣ್ಣು ಖರೀದಿಸಿ ಮಹಿಳಾ ವ್ಯಾಪಾರಿಯ ಸಮಸ್ಯೆ ಆಲಿಸಿದ್ರು.

ಜಿಲ್ಲಾ ಪ್ರವಾಸದ ಸಂದರ್ಭದ ಸಚಿವರು ಖಟಕ ಚಿಂಚೊಳಿ ಗ್ರಾಮದಿಂದ ಬೀದರ್​ಗೆ ಆಗಮಿಸುತ್ತಿದ್ದರು. ಈ ವೇಳೆ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ರಸ್ತೆ ಪಕ್ಕದಲ್ಲಿ ಬುಟ್ಟಿಯೊಂದರಲ್ಲಿ ಸೀಬೆ ಹಣ್ಣು ವ್ಯಾಪಾರ ಮಾಡ್ತಿದ್ದ ಮಹಿಳೆಯನ್ನು ಗಮನಿಸಿ ಮುಂದೆ ಹೋಗುತ್ತಿದ್ದ ಸಚಿವರ ಕಾರು ಮತ್ತೆ ವಾಪಸ್​ ಮಹಿಳೆ ಹತ್ತಿರ ಬಂದು 500 ರೂಪಾಯಿಯ ಸೀಬೆಹಣ್ಣು ಖರೀದಿಸಿದರು.

ರಸ್ತೆ ಪಕ್ಕದಲ್ಲಿ ಹಣ್ಣು ಖರೀಸಿದ ಸಚಿವ ಚವ್ಹಾಣ

ಗದ್ದೆಯಲ್ಲಿರುವ ಸೀಬೆ ಹಣ್ಣು ರಸ್ತೆಗೆ ತಂದು ಮಾರಾಟ ಮಾಡಿ ಜೀವನ ಮಾಡ್ತಿವಿ. ಒಂದೊಂದು ದಿನ ಗ್ರಾಹಕರು ಸಿಗ್ತಾರೆ. ಮತ್ತೊಂದು ದಿನ ಗ್ರಾಹಕರೇ ಇಲ್ಲದೆ ಪರದಾಡಬೇಕಾಗುತ್ತೆ ಎಂದು ಮಹಿಳೆ ಸಚಿವರ ಮುಂದೆ ತನ್ನ ಗೋಳನ್ನು ತೋಡಿಕೊಂಡಳು.

Last Updated : Jan 3, 2020, 2:59 PM IST

For All Latest Updates

ABOUT THE AUTHOR

...view details