ಬೀದರ್: ಕಾರಂಜಾ ಜಲಾಶಯದಲ್ಲಿ ಭೂಮಿ ಮುಳುಗಡೆಯಾಗಿ ಬೀದಿ ಪಾಲಾಗಿದ್ದಿವಿ, ನಾಲ್ಕು ದಶಕಗಳಿಂದ ಮನವಿ ಕೊಟ್ಟು ಹೋರಾಟ ಮಾಡಿ ಜೀವಂತವಾಗಿದ್ದರೂ ಸತ್ತೋಗಿದ್ದಿವಿ ದಯವಿಟ್ಟು ನಮ್ಮ ಬಗ್ಗೆ ಕರುಣೆ ತೋರಿ ಎಂದು ಸಂತ್ರಸ್ತ ಅಜ್ಜಿಯೊಬ್ಬಳು ಸಚಿವ ಪ್ರಭು ಚವ್ಹಾಣ್ ಮುಂದೆ ಕಣ್ಣಿರು ಹಾಕಿದ್ದಾಳೆ.
ಕಾರಂಜಾ ಸಂತ್ರಸ್ತರನ್ನ ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್ ನಗರದ ಅಂಬೇಡ್ಕರ್ ವೃತ್ತ ದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡಸಿದ ಪ್ರತಿಭಟನಾಕಾರರನ್ನು ಭೇಟಿ ಮಾಡಲು ಬಂದ ಸಚಿವ ಪ್ರಭು ಚವ್ಹಾಣ ಮುಂದೆ ಅಜ್ಜಿ ಕಣ್ಣಿರು ಹಾಕಿದ್ದಾರೆ.
ಇದೇ ವೇಳೆಯಲ್ಲಿ ಪ್ರತಿಭಟನಾಕಾರರು ನಾವು ಮನವಿ ಕೊಟ್ಟು ಸಾಕಾಗಿ ಹೊಗಿದೆ. ಜಲಾಶಯ ನಿರ್ಮಾಣಕ್ಕೆ ಭೂಮಿ ಕೊಟ್ಟರೂ ಪರಿಹಾರ ಕೊಡದೇ ಸರ್ಕಾರ ಅನ್ಯಾಯ ಮಾಡುತ್ತಿದೆ. ಅಂದು ನಿಗದಿಪಡಿಸಿದ ಪರಿಹಾರ ಇಂದು ಕೊಟ್ಟರೆ ಹೇಗೆ. ರೂಪಾಯಿ ಮೌಲ್ಯ ಬದಲಾದಂಗೆ ಪರಿಹಾರದ ಮೊತ್ತವು ಬದಲಾಯಿಸಿ ಕೊಡಲು ಆಗಲ್ಲ ಎಂದರೆ ಹೇಗೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾರಂಜಾ ಜಲಾಶಯದಲ್ಲಿ ಭೂಮಿ ಕಳೆದುಕೊಂಡಿದಕ್ಕೆ ನಮ್ಮ ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ಇದ್ದ ಜಮಿನು ಕೊಟ್ಟು ಈಗ ಊಟಕ್ಕೂ ಗತಿ ಇಲ್ಲದಂತೆ ಸುತ್ತಾಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರ ನಿಯೋಗ ಮಾಡಿ ಸಿಎಂ ಯಡಿಯೂರಪ್ಪ ಅವರ ಹತ್ರ ಕರೆದುಕೊಂಡು ಹೊಗಿ. ಪ್ರತಿ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಅವರು ನಮ್ಮ ಬೆನ್ನಿಗೆ ನಿಂತಿದ್ದರು. ಈಗ ಸರ್ಕಾರ ನಿಮ್ಮದಿದೆ ನಮ್ಮದೊಂದು ನಿಯೋಗ ಮಾಡಿ ಹೊಗೋಣ ಎಂದು ಸಚಿವ ಚವ್ಹಾಣ್ಗೆ ಒತ್ತಡ ಹಾಕಿದರು. ಈ ವೇಳೆಯಲ್ಲಿ ಜಿಲ್ಲಾಧಿಕಾರಿ ಡಾ.ಎಚ್.ಆರ್ ಮಹದೇವ ಕೂಡ ಉಪಸ್ಥಿತರಿದ್ದರು.