ಬೀದರ್: ಕಲ್ಯಾಣ ಕರ್ನಾಟಕ ವೇದಿಕೆಯಲ್ಲಿ ಭಾಷಣ ಮಾಡುವಾಗ ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಎಡವಟ್ಟು ಮಾಡಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ವೇದಿಕೆ ಭಾಷಣದಲ್ಲಿ ಸಚಿವ ಪ್ರಭು ಚವ್ಹಾಣ ಎಡವಟ್ಟು...!
ಕಲ್ಯಾಣ ಕರ್ನಾಟಕ ವೇದಿಕೆಯಲ್ಲಿ ಭಾಷಣ ಮಾಡುವಾಗ ದೇಶ ಸ್ವಾತಂತ್ರ್ಯವಾದ ನಂತರ ಒಂದು ವರ್ಷ ತಡವಾಗಿ ಹೈದ್ರಾಬಾದ್ ನಿಜಾಮರ ಆಡಳಿತದಿಂದ ಹೈ.ಕ. ಭಾಗ ವಿಮುಕ್ತಿ ಪಡೆದಿತ್ತು ಎಂದು ಹೇಳುವಾಗ ಮುಂಬೈ ಕರ್ನಾಟಕದ ಹೆಸರನ್ನೂ ಸೇರಿಸಿ ಸಚಿವ ಪ್ರಭು ಚವ್ಹಾಣ ಎಡವಟ್ಟು ಮಾಡಿಕೊಂಡಿದ್ದಾರೆ.
ಹೈ.ಕ. ವಿಮೋಚನಾ ಬದಲಾಗಿ ಮೊದಲ ಬಾರಿ ಕಲ್ಯಾಣ ಕರ್ನಾಟಕ ಉತ್ಸವ ಎಂದು ಹೈ.ಕ. ಭಾಗದಲ್ಲಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಬೀದರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಕನ್ನಡದಲ್ಲೇ ಮಾತನಾಡಲು ಆರಂಭಿಸಿದ ಸಚಿವರು, ನಂತರ ಹಿಂದಿ ಭಾಷೆಯನ್ನು ಬಳಸಿ, ಇವತ್ತು ಐತಿಹಾಸಿಕ ದಿನ. ದೇಶ ಸ್ವಾತಂತ್ರ್ಯ ಪಡೆದ ಒಂದು ವರ್ಷದ ನಂತರ ಹೈದ್ರಾಬಾದ್- ಕರ್ನಾಟಕ ಭಾಗ ಸ್ವಾತಂತ್ರ್ಯ ಪಡೆದಿತ್ತು ಎಂದು ಹೇಳುವಾಗ ಹೈ.ಕ. ಜೊತೆಗೆ ಮುಂಬೈ ಕರ್ನಾಟಕದ ಹೆಸರನ್ನೂ ಸೇರಿಸಿ ಎಡವಟ್ಟು ಮಾಡಿಕೊಂಡರು. ನಂತರ ಮತ್ತೆ ಹೈದ್ರಾಬಾದ್ ಕರ್ನಾಟಕ ಭಾಗ ಎಂದು ಸರಿಪಡಿಸಿಕೊಂಡರು.
1947 ರಲ್ಲಿ ಮುಂಬೈ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಹೈದ್ರಾಬಾದ್ ಕರ್ನಾಟಕ ಹೆಸರು ಹೋಗಿ ಕಲ್ಯಾಣ ಕರ್ನಾಟಕ ಆಗಬೇಕು ಅಂತ ಶರಣರು, ಸಂತರು, ಹೋರಾಟಗಾರರು ಮನವಿ ಮಾಡಿದ್ದರು. ಆ ಮನವಿಗೆ ಸ್ಪಂದಿಸಿರುವ ರಾಜ್ಯ ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದೆ ಎಂದು ಸಚಿವರು ಹೇಳಿದರು.