ಕರ್ನಾಟಕ

karnataka

ETV Bharat / state

ಸರ್ಕಾರಿ ಆಸ್ಪತ್ರೆಗೆ ಸಚಿವ ಪ್ರಭು ಚವ್ಹಾಣ್ ಭೇಟಿ: ಅಧಿಕಾರಿಗಳಿಗೆ ತರಾಟೆ - ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಪ್ರಭು ಚವ್ಹಾಣ್

ಜಿಲ್ಲೆಯ ಭಾಲ್ಕಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಪ್ರಭು ಚವ್ಹಾಣ್, ಆಸ್ಪತ್ರೆಯ ಕೊಠಡಿಯೊಂದರಲ್ಲಿ ರಾಶಿಗಟ್ಟಲೆ ಹಾಸಿಗೆ, ಹೊದಿಕೆ, ವೆಂಟಿಲೇಟರ್​​​ ಕಿಟ್, ಕುರ್ಚಿ ಸೇರಿದಂತೆ ಕಂಪನಿಯಿಂದ ತಂದ ಹೊಸ ಸಾಮಗ್ರಿಗಳನ್ನು ಬಿಸಾಡಿದ್ದನ್ನು ಕಂಡು ಸ್ಥಳದಲ್ಲಿದ್ದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

Minister Prabhu Chauhan visits government hospital
ಸಚಿವ ಪ್ರಭು ಚವ್ಹಾಣ್ ಸರ್ಕಾರಿ ಆಸ್ಪತ್ರೆಗೆ ಭೇಟಿ

By

Published : Jun 24, 2020, 8:24 PM IST

ಬೀದರ್: ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಬಳಕೆಗೆ ನೀಡಲಾದ ವಸ್ತುಗಳನ್ನು ಕೊಠಡಿಯೊಂದರಲ್ಲಿ ಮೂಲೆಗುಂಪಾಗಿಸಿದ್ದನ್ನು ಕಂಡು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್​ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಸಚಿವ ಪ್ರಭು ಚವ್ಹಾಣ್
ಜಿಲ್ಲೆಯ ಭಾಲ್ಕಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಆಸ್ಪತ್ರೆಯ ಕೊಠಡಿಯೊಂದರಲ್ಲಿ ರಾಶಿಗಟ್ಟಲೆ ಹಾಸಿಗೆ, ಹೊದಿಕೆ, ವೆಂಟಿಲೇಟರ್​​​ ಕಿಟ್, ಕುರ್ಚಿ ಸೇರಿದಂತೆ ಕಂಪನಿಯಿಂದ ತಂದ ಹೊಸ ಸಾಮಗ್ರಿಗಳನ್ನು ಬಿಸಾಡಿದ್ದನ್ನು ಕಂಡು ಸ್ಥಳದಲ್ಲಿದ್ದ ವೈದ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ಮಾಸ್ಕ್ ಇಲ್ಲದಿದ್ದರೆ ಕೇಸ್ ಹಾಕಿ: ಆಸ್ಪತ್ರೆ ಆವರಣದಲ್ಲಿ ಮಾಸ್ಕ್​ ಹಾಕದೆ ಬಂದವರ ಮೇಲೆ ಕೇಸ್​ ಹಾಕಿ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಸ್ಥಳದಲ್ಲೇ ಇದ್ದ ಪೊಲೀಸರಿಗೆ ಸೂಚನೆ ನೀಡುತ್ತಿದ್ದಂತೆ, ಸಚಿವರ ಬೆಂಬಲಿಗರು ಸೇರಿದಂತೆ ಅಧಿಕಾರಿಗಳು ಮುಖಕ್ಕೆ ಮಾಸ್ಕ್ ಹಾಕಿಕೊಂಡರು.

ಸಚಿವ ಪ್ರಭು ಚವ್ಹಾಣ್​ ಜಿಲ್ಲೆಯ ಕಮಲನಗರ, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ ಹಾಗೂ ಚಿಟಗುಪ್ಪ ಸಾರ್ವಜನಿಕ ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್., ಜಿಲ್ಲಾ ಪಂಚಾಯತ್ ಸಿಇಒ ಗ್ಯಾನೇಂದ್ರ ಕುಮಾರ್ ಗಂಗ್ವಾರ್, ಡಿಹೆಚ್​ಒ ಡಾ. ವಿ.ಜಿ.ರೆಡ್ಡಿ ಇದ್ದರು.

ABOUT THE AUTHOR

...view details