ಕರ್ನಾಟಕ

karnataka

ETV Bharat / state

ಮಲೇಷಿಯಾ ಜೈಲಲ್ಲಿದ್ದ ಯುವಕನನ್ನು ತಾಯ್ನಾಡು ಸೇರಿಸಿದ ಸಚಿವ ಖೂಬಾ

ನಮ್ಮಲ್ಲಿಯೇ ಮಾಡಲು ಹಲವು ಉದ್ಯೋಗಗಳಿವೆ. ಆದರೂ ವಿದೇಶಕ್ಕೆ ಹೋಗಲು ನಿಶ್ಚಯಿಸಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು- ಸಚಿವ ಖೂಬಾ

Minister Bhagwanth Khuba
ಸಚಿವ ಭಗವಂತ ಖೂಬಾ

By

Published : Dec 18, 2022, 10:17 AM IST

Updated : Dec 18, 2022, 11:25 AM IST

ಬೀದರ್: ನಕಲಿ ಏಜೆಂಟ್​ ಮೂಲಕ ವೀಸಾ ಪಡೆದು, ಉದ್ಯೋಗಕ್ಕೆಂದು ಮಲೇಷಿಯಾಕ್ಕೆ ತೆರಳಿ ಮೋಸ ಹೋಗಿ ಜೈಲು ಸೇರಿದ್ದ ಜಿಲ್ಲೆಯ ಯುವಕನೊಬ್ಬ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಪ್ರಯತ್ನದಿಂದಾಗಿ ಭಾರತಕ್ಕೆ ಮರಳಿದ್ದಾನೆ. ಭಾಲ್ಕಿ ತಾಲೂಕಿನ ಸಿದ್ಧೇಶ್ವರ ಗ್ರಾಮದ ಶರಣಪ್ಪ ವೈಜಿನಾಥ ತಾಯ್ನಾಡಿಗೆ ಮರಳಿದ ಯುವಕ.

ಶರಣಪ್ಪ ಮೋಸ ಹೋದ ವಿಷಯ ತಿಳಿದ ಕೂಡಲೇ ಭಗವಂತ ಖೂಬಾ ಅವರು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದಾರೆ. ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಯುವಕನನ್ನು ಜೈಲಿನಿಂದ ಬಿಡುಗಡೆಗೊಳಿಸಿ ಕರೆ ತಂದಿದ್ದಾರೆ. ನಗರದಲ್ಲಿರುವ ಸಚಿವರ ಗೃಹ ಕಚೇರಿಗೆ ಬಂದ ಯುವಕ ಹಾಗೂ ಕುಟುಂಬದ ಸದಸ್ಯರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ನನಗೆ ಹೊಸ ಜೀವನ ನೀಡಿದ್ದೀರಿ. ನಮ್ಮ ಕುಟುಂಬ ನಿಮಗೆ ಚಿರಋಣಿ ಎಂದು ಶರಣಪ್ಪ ಹೇಳಿದರು.

ನಮ್ಮಲ್ಲಿಯೇ ಮಾಡಲು ಹಲವು ಉದ್ಯೋಗಗಳಿವೆ. ಆದರೂ ವಿದೇಶಕ್ಕೆ ಹೋಗಲು ನಿಶ್ಚಯಿಸಿದ್ದಲ್ಲಿ ಏಜೆಂಟರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡೇ ಹೋಗಬೇಕು. ನಕಲಿ ಏಜೆಂಟರಿಂದ ಮೋಸ ಹೋಗಬಾರದು ಎಂದು ಖೂಬಾ ಸಲಹೆ ನೀಡಿದರು. ಅಲ್ಲದೇ ಇವರಂತಹ ಎರಡು ಪ್ರಕರಣಗಳು ನನ್ನ ಬಳಿ ಇವೆ. ಅವರೂ ಮಲೇಷಿಯಾ ಜೈಲಿನಲ್ಲಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಕರೆ ತರುತ್ತೇನೆ ಎಂದು ಸಚಿವರು ಭರವಸೆ ಕೊಟ್ಟರು.

ಇದನ್ನೂ ಓದಿ:ಕರ್ನಾಟಕಕ್ಕೆ ಆಗಮಿಸಲಿದೆ ಬಿಜೆಪಿ ಅಗ್ರ ರಾಷ್ಟ್ರೀಯ ನಾಯಕರ ದಂಡು

Last Updated : Dec 18, 2022, 11:25 AM IST

ABOUT THE AUTHOR

...view details