ಕರ್ನಾಟಕ

karnataka

ETV Bharat / state

ಬಸವಕಲ್ಯಾಣದಲ್ಲಿ ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿಬಿದ್ದ ಜನ! - ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು

ಬಸವಕಲ್ಯಾಣ ತಾಲೂಕಿನ ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು ಚಿಮ್ಮುತ್ತಿದ್ದು, ಇದನ್ನು ನೋಡಲು ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

milk-spilled-from-neem-tree-in-basavakalyana
ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿ ಬಿದ್ದ ಜನರು

By

Published : Jan 2, 2020, 10:53 PM IST

ಬಸವಕಲ್ಯಾಣ:ತಾಲೂಕಿನ ಯರಬಾಗ್ ಗ್ರಾಮದಲ್ಲಿ ಬೇವಿನ ಮರದಿಂದ ಹಾಲು ಚಿಮ್ಮುತ್ತಿದ್ದು, ಇದನ್ನು ನೋಡಲು ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಗ್ರಾಮದ ಚಂದ್ರಪ್ಪ ನಿಂಗದಳ್ಳಿ ಎಂಬುವರ ಮನೆ ಅಂಗಳದಲ್ಲಿ ಇರುವ ಬೇವಿನ ಮರದಿಂದ ಗುರುವಾರ ಸಂಜೆ 6 ಗಂಟೆಯಿಂದ ಹಾಲಿನ ರೂಪದ ಬಿಳಿ ಬಣ್ಣದ ದ್ರವ್ಯ ಹೊರ ಬರುತ್ತಿದ್ದು, ಇದನ್ನ ನೋಡಲು ಜನರು ಮುಗಿಬಿದ್ದಿದ್ದಾರೆ.

ಬೇವಿನ ಮರದಿಂದ ಚಿಮ್ಮಿದ ಹಾಲು: ನೋಡಲು ಮುಗಿಬಿದ್ದ ಜನರು

ಮರದಿಂದ ಹಾಲು ಬರುತ್ತಿದೆ ಎನ್ನುವ ವಿಷಯ ಕೆಲವೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯರಬಾಗ ಸುತ್ತಲಿನ ಗ್ರಾಮಗಳಾದ ಸದಲಾಪೂರ, ಪಂಡರಗೇರಾ, ರಾಂಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಜನ ತಂಡೋಪತಂಡವಾಗಿ ಸ್ಥಳಕ್ಕೆ ಧಾವಿಸಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಮರದಿಂದ ಹಾಲು ಚಿಮ್ಮುವ ಘಟನೆ ಶುಭ ಸಂಕೇತವಾಗಿದೆ. ಇದರಿಂದ ಗ್ರಾಮದ ಜನತೆಗೆ ಒಳ್ಳೆಯದಾಗಲಿದೆ ಎಂದು ಸ್ಥಳದಲ್ಲಿದ್ದ ಜನರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಲು ನೋಡಲೆಂದು ಆಗಮಿಸಿದ ಬಹುತೇಕ ಜನರು ಇದೊಂದು ಪವಾಡವೆಂದು ನಂಬಿ ಭಕ್ತಿಯಿಂದ ಮರಕ್ಕೆ ಪೂಜೆ ಸಲ್ಲಿಸಿ ನಮಿಸುತ್ತಿದ್ದಾರೆ.

ಬೇವಿನ ಮರದಿಂದ ಬಿಳಿ ಬಣ್ಣದ ದ್ರವ್ಯ ಹೊರ ಬರುವುದು ಆಶ್ಚರ್ಯ ಪಡುವಂತಹ ವಿಷಯವೇನಲ್ಲ. ನೈಸರ್ಗಿಕವಾಗಿ ಇದೊಂದು ಸಹಜ ಪ್ರಕ್ರಿಯೆಯಾಗಿದೆ. ಇಂತಹ ಪ್ರಕರಣ ಅನೇಕ ಕಡೆಗಳಲ್ಲಿ ಮೇಲಿಂದ ಮೇಲೆ ನಡೆಯುತ್ತಲೇ ಇರುತ್ತದೆ ಎಂದು ಕೆಲವರು ಹೇಳುತ್ತಾರೆ.

ABOUT THE AUTHOR

...view details