ಕರ್ನಾಟಕ

karnataka

ETV Bharat / state

ಕೊರೊನಾಗೆ ವ್ಯಾಪಾರಿ ಬಲಿ: ಜು.26ರವರೆಗೆ ಸರಾಫ್ ಬಜಾರ್​ ಬಂದ್ - ಬಸವಕಲ್ಯಾಣ

ಬೀದರ್​ನಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜುಲೈ 26ರವರೆಗೆ ಸರಾಫ್ ಬಜಾರ್​ ಬಂದ್​ ಮಾಡಲು ಸರಾಫ್ ಮತ್ತು ಸುವರ್ಣಕಾರ ಸಂಘ ತೀರ್ಮಾನಿಸಿದೆ.

ಜು.26ರವರೆಗೆ ಸರಾಫ್ ಬಜಾರ್​ ಬಂದ್
ಜು.26ರವರೆಗೆ ಸರಾಫ್ ಬಜಾರ್​ ಬಂದ್

By

Published : Jul 22, 2020, 8:34 AM IST

ಬಸವಕಲ್ಯಾಣ (ಬೀದರ್​):ಸರಾಫ್ ಬಜಾರ್​ನ ವ್ಯಾಪಾರಿ ಕೊರೊನಾದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಜುಲೈ 26ರವರೆಗೆ ಬಂದ್​ ಮಾಡಲು ಸರಾಫ್ ಮತ್ತು ಸುವರ್ಣಕಾರ ಸಂಘದಿಂದ ನಿರ್ಣಯ ಕೈಗೊಳ್ಳಲಾಗಿದೆ.

ಬಜಾರ್​ನಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇವರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ಕೊರೊನಾ ವರದಿಯಲ್ಲಿ ವೈರಸ್​ ಇರುವುದು ದೃಢವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸರಾಫ್ ಬಜಾರ್​ನ ಎಲ್ಲ ಅಂಗಡಿಗಳನ್ನು ಮುಚ್ಚಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ತಾಲೂಕಿನಲ್ಲಿ ಕೊರೊನಾ ಕಾಟ ಮುಂದುವರೆದಿದ್ದು, ಮಂಗಳವಾರ ನಾಲ್ವರಿಗೆ ಕೊರೊನಾ ದೃಢವಾಗಿದೆ. ಇಲ್ಲಿನ ಕಾಳಿಗಲ್ಲಿಯ 30 ವರ್ಷದ ವ್ಯಕ್ತಿ, ಧೋಬಿ ಗಲ್ಲಿಯ 17 ವರ್ಷದ ಬಾಲಕಿ, ಸರ್ಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿರುವ 43 ವರ್ಷದ ಮಹಿಳೆ ಹಾಗೂ ಮುಡಬಿವಾಡಿಯ 18 ವರ್ಷದ ಯುವತಿಗೆ ಸೋಂಕು ತಗುಲಿದೆ.

ಅಷ್ಟೇ ಅಲ್ಲದೆ, ನಗರದ ಬಂಜಾರ ಕಾಲೊನಿಯ 43 ವರ್ಷದ ವ್ಯಕ್ತಿ ಬೀದರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೋವಿಡ್​ ವರದಿಯಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಹೆಲ್ತ್ ಬುಲೆಟಿನ್‌ನಲ್ಲಿ ಅಧಿಕೃತವಾಗಿ ಘೋಷಣೆಯಾಗಿಲ್ಲ.

ABOUT THE AUTHOR

...view details