ಕರ್ನಾಟಕ

karnataka

ETV Bharat / state

ಐಸೋಲೇಷನ್ ವಾರ್ಡ್​​ನಲ್ಲೂ ಸಾಮೂಹಿಕ ಪ್ರಾರ್ಥನೆ :  ಕೈಮುಗಿದು ಕೇಳಿಕೊಂಡ ಸಚಿವರು! - ಆಸ್ಪತ್ರೆಯಲ್ಲಿ ಸಾಮೂಹಿಕ ನಮಾಜ್​

ಐಸೋಲೇಷನ್​​ನಲ್ಲಿರುವ ಕೊರೊನಾ ಶಂಕಿತರು ವಾರ್ಡ್​​ನಲ್ಲೇ ಸಾಮೂಹಿಕ ಪ್ರಾರ್ಥನೆ​ ಮಾಡಿರುವ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ.

mass namz in Isolation ward of basavkalyan
ಐಸೋಲೇಶನ್​ ವಾರ್ಡ್​​ನಲ್ಲಿಯೇ ಸಾಮೂಹಿಕ ನಮಾಜ್

By

Published : Apr 11, 2020, 6:19 PM IST

Updated : Apr 12, 2020, 11:13 AM IST

ಬಸವಕಲ್ಯಾಣ:ಕೊರೊನಾ ಶಂಕಿತರು ಐಸೋಲೇಷನ್​ ವಾರ್ಡ್​​ನಲ್ಲಿಯೇ ಸಾಮೂಹಿಕವಾಗಿ ಪ್ರಾರ್ಥನೆ​ ಮಾಡುವ ಮೂಲಕ ಸಾಮಾಜಿಕ ಅಂತರದ ನಿಯಮ ಗಾಳಿಗೆ ತೂರಿದ್ದಾರೆ.

ಐಸೋಲೇಷನ್​ ವಾರ್ಡ್​​ನಲ್ಲಿಯೇ ಸಾಮೂಹಿಕ ಪ್ರಾರ್ಥನೆ
ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್, ಇಂದು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್​ಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ವಾರ್ಡ್​​ನಲ್ಲಿದ್ದ ಕೆಲ ಜನರು ತಮ್ಮ ಬೆಡ್​​ಗ​​​ಳಿಂದ ಕೆಳಗೆ ಕುಳಿತು ಪ್ರಾರ್ಥನೆ ಮಾಡುತ್ತಿರುವುದು ಗಮನಕ್ಕೆ ಬಂತು. ಈ ದೃಶ್ಯ ಕಂಡು ಕೆಲ ಕ್ಷಣ ದಿಗ್ಭ್ರಮೆಗೊಳಗಾದ ಸಚಿವರು, ಸ್ಥಳದಲ್ಲಿದ್ದ ತಹಶೀಲ್ದಾರ್​, ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಒಟ್ಟಾಗಿ ಕುಳಿತುಕೊಳ್ಳುವುದು ಬೇಡ ಎಂದು ದೇಶದಾದ್ಯಂತ ಬೊಬ್ಬೆ ಹೊಡೆಯಲಾಗುತ್ತಿದೆ. ಆದರೆ ನೀವು ಇದೆಲ್ಲ ಮುಂದುವರಿಸಿದ್ದೀರಿ. ಹೀಗೆ ಮಾಡೋದು ಸರಿಯಲ್ಲ, ಏನೇ ಮಾಡೋದಿದ್ರೂ ಮನೆಯಲ್ಲಿ ಇದ್ದಾಗ ಮಾಡಬೇಕು. ಆಸ್ಪತ್ರೆಗೆ ಬಂದು ಹೀಗೆಲ್ಲ ಮಾಡುವುದು ಸರಿಯಲ್ಲ, ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ, ಸರ್ಕಾರದ ನಿಯಮಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಆಸ್ಪತ್ರೆಯಲ್ಲಿರುವ ಕೊರೊನಾ ಶಂಕಿತರ ಮೇಲೆ ನಿಗಾ ವಹಿಸಬೇಕು. ಐಸೋಲೇಷನ್​ ವಾರ್ಡ್​​ಗೆ ಕಡ್ಡಾಯವಾಗಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು ಎಂದು ಸ್ಥಳದಲ್ಲಿದ್ದ ಸಿಪಿಐಗೆ ಸಚಿವರು ಸೂಚಿಸಿದರು.

Last Updated : Apr 12, 2020, 11:13 AM IST

ABOUT THE AUTHOR

...view details