ಕರ್ನಾಟಕ

karnataka

ETV Bharat / state

ಕೊರೊನಾ ಮುಕ್ತಿಗೆ ಪ್ರಾರ್ಥಿಸಿ ಅನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ - ಕೊರೊನಾ ಮುಕ್ತಿಗಾಗಿ ಪೂಜೆ

ಕೊರೊನಾ ವೈರಸ್​ನಿಂದ ಮುಕ್ತಗೊಳಿಸಲು ಪ್ರಾರ್ಥಿಸಿ,ಬಸವಕಲ್ಯಾಣ ಅನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.

Mass Correspondence Worship at anubhava mantapa
ಕೊರೊನಾ ಮುಕ್ತಿಗೆ ಪ್ರಾರ್ಥಿಸಿ ಅನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ

By

Published : Apr 13, 2020, 11:48 PM IST

ಬೀದರ್​/ಬಸವಕಲ್ಯಾಣ:ವಿಶ್ವವನ್ನ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್​ನಿಂದ ಮುಕ್ತಗೊಳಿಸಲು ಪ್ರಾರ್ಥಿಸಿ,ಬಸವಕಲ್ಯಾಣ ಅನುಭವ ಮಂಟಪದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಲಾಯಿತು.

ಬಸವ ಸಮಿತಿಯಿಂದ ಕರೆ ನೀಡಲಾದ ಹಿನ್ನೆಲೆ, ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಬಸವರಾಜ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗುರುನಾಥ ಗಡ್ಡೆ, ಬಿಕೆಡಿಬಿ ಮಾಜಿ ಸದಸ್ಯ ಶಿವರಾಜ ನರಶಟ್ಟಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಇಷ್ಟಲಿಂಗ ಪೂಜೆ ವೇಳೆ ಸಾಮೂಹಿಕ ವಚನ ಪಠಣ ಮಾಡುವ ಮೂಲಕ ಕೊರೊನಾ ಮುಕ್ತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

ABOUT THE AUTHOR

...view details