ಕರ್ನಾಟಕ

karnataka

ETV Bharat / state

ನರ್ಸಿಂಗ್ ಕೊರ್ಸ್ ಪರೀಕ್ಷೆಯಲ್ಲಿ‌ ಸಾಮೂಹಿಕ ನಕಲು: ಸಿಬ್ಬಂದಿಗಳಿಂದಲೇ ಸಾಥ್​ - bidar college

ಏಕಕಾಲಕ್ಕೆ ನಾಲ್ಕು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪರಿಕ್ಷೆ ಬರೆಯುತ್ತಿದ್ದು, ಈ ಪೈಕಿ ಬಹುತೇಕ ವಿಧ್ಯಾರ್ಥಿಗಳು ನಕಲು ಮಾಡಲು ಪರಿಕ್ಷಾ ಕೇಂದ್ರದ ಸಿಬ್ಬಂದಿಗಳೇ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ನರ್ಸಿಂಗ್ ಕೊರ್ಸ್ ಪರಿಕ್ಷೆಯಲ್ಲಿ‌ ಸಾಮೂಹಿಕ ನಕಲು

By

Published : Sep 6, 2019, 6:21 PM IST

ಬೀದರ್: ಡಿಪ್ಲೊಮಾ ಇನ್ ನರ್ಸಿಂಗ್ ವಿಭಾಗದ ಮೊದಲನೆ ವರ್ಷದ ಪರಿಕ್ಷೆ ನಡೆಯುತ್ತಿದ್ದು, ಪರಿಕ್ಷೆ ಬರೆಯುತ್ತಿರುವ ಬಹುತೇಕ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.

ನರ್ಸಿಂಗ್ ಕೊರ್ಸ್ ಪರಿಕ್ಷೆಯಲ್ಲಿ‌ ಸಾಮೂಹಿಕ ನಕಲು

ನಗರದ ಹೊರ ವಲಯದಲ್ಲಿರುವ ವಸಂತಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬಹಿರಂಗವಾಗೇ ನಕಲು ಮಾಡಿ ಪರೀಕ್ಷೆ ಬರೆಯುತ್ತಿರುವ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಏಕಕಾಲಕ್ಕೆ ನಾಲ್ಕು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ಬಹುತೇಕ ವಿದ್ಯಾರ್ಥಿಗಳು ನಕಲು ಮಾಡಲು ಪರೀಕ್ಷಾ ಕೇಂದ್ರದ ಸಿಬ್ಬಂದಿಗಳೇ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ಪರೀಕ್ಷಾ ಕೇಂದ್ರದ ಕೊಠಡಿಯ ಬಾಗಿಲಲ್ಲಿ ಹಲವಾರು ನಕಲು ಚೀಟಿಗಳು ಪತ್ತೆಯಾಗಿವೆ. ಅಲ್ಲದೆ, ಪರಿಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆಯಾದರೂ ಅವುಗಳನ್ನು ಬಂದ್​ ಮಾಡಿದ್ದಾರೆ. ಕಳೆದೆರಡು ವರ್ಷಗಳ ಹಿಂದೆಯೂ ಕೂಡ ಈ ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ABOUT THE AUTHOR

...view details