ಬೀದರ್:ಮರಾಠ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಸೇರಿದಂತೆ ಸಂವಿಧಾನಬದ್ಧ ಸೌಲಭ್ಯಗಳು ಕೊಡುವಲ್ಲಿ ಬಿಜೆಪಿ ಅಸಹಕಾರ ತೋರಿದೆ ಎಂದು ಆರೋಪಿಸಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮರಾಠ ಸಮುದಾಯ ಕಾಂಗ್ರೆಸ್ಗೆ ಬೆಂಬಲಿಸಲಿದೆ ಎಂದು ಸಮುದಾಯದ ನಾಯಕ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಜಂಟಿ ಸುದ್ದಿಗೊಷ್ಠಿ ನಡೆಸಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಮರಾಠ ಸಮುದಾಯಕ್ಕೆ ಟಿಕೆಟ್ ಕೊಟ್ಟು ರಾಜಕೀಯ ಸ್ಥಾನಮಾನ ಕೊಡಬೇಕು ಎಂದು ಬಿಜೆಪಿಗೆ ಆಗ್ರಹಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಸಂಸದ ಭಗವಂತ ಖೂಬಾ ಜೆಡಿಎಸ್ನಲ್ಲಿದ್ದ ಮಲ್ಲಿಕಾರ್ಜುನ್ ಖೂಬಾ ಅವನ್ನು ಬಿಜೆಪಿಗೆ ಸೆರ್ಪಡೆ ಮಾಡಿಕೊಂಡು ಮರಾಠ ಸಮುದಾಯಕ್ಕೆ ಸಿಗಬೇಕಾದ ಟಿಕೆಟ್ ಅವಕಾಶವನ್ನು ತಪ್ಪಿಸಿದ್ದಾರೆ.