ಬೀದರ್: ಮಾಂಡೌಸ್ ಚಂಡಮಾರುತ ಎಫೆಕ್ಟ್ನಿಂದ ಗಡಿ ಜಿಲ್ಲೆ ಬೀದರ್ ಜನರು ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯ ಬ್ರೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ವೈಯೋವೃದ್ಧರು, ಮಕ್ಕಳು, ಮಹಿಳೆ ಸೇರಿದಂತೆ ಶೇ. 50% ಅಧಿಕ ರೋಗಿಗಳು ಬ್ರೀಮ್ಸ್ಗೆ ದಾಖಲಾಗುತ್ತಿದ್ದಾರೆ.
ಮಾಂಡೌಸ್ ಚಂಡಮಾರುತ ಎಫೆಕ್ಟ್ .. ಗಡಿ ಜಿಲ್ಲೆ ಬೀದರ್ನಲ್ಲೂ ಹೆಚ್ಚಿದ ಅನಾರೋಗ್ಯ ಸಮಸ್ಯೆ
ಮಾಂಡೌಸ್ ಚಂಡಮಾರುತ ಎಫೆಕ್ಟ್ನಿಂದಾಗಿ ಬೀದರ್ ಜಿಲ್ಲೆಯ ಜನರಲ್ಲಿ ಅನಾರೋಗ್ಯದ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ದಿನೇ ದಿನೇ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಬ್ರೀಮ್ಸ್ ಆಸ್ಪತ್ರೆ
ಸೈಕ್ಲೋನ್ ಎಫೆಕ್ಟ್ಗೆ ಕೆಮ್ಮು, ಜ್ವರ, ನೆಗಡಿ ಸೇರಿದಂತೆ ಹಲವಾರು ರೀತಿಯ ಅನಾರೋಗ್ಯಕರ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಬ್ರೀಮ್ಸ್ ಆಸ್ಪತ್ರೆಯ ಒಪಿಡಿಯಲ್ಲಿ ಜನರು ಕ್ಯೂನಲ್ಲಿ ನಿಂತು ಚೀಟಿ ಪಡೆಯುತ್ತಿದ್ದಾರೆ. ಸೈಕ್ಲೋನ್ ಎಫೆಕ್ಟ್ಗೆ ನಾವು ಅನಾರೋಗ್ಯಕ್ಕೆ ತುತ್ತಾಗಿದ್ದು, ಚಿಕಿತ್ಸೆಗಾಗಿ ಬ್ರೀಮ್ಸ್ಗೆ ಬಂದಿದ್ದೇವೆ ಎಂದು ರೋಗಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ ಮಳೆ, ಶೀತಗಾಳಿ.. ಜನರಿಗೆ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ
Last Updated : Dec 13, 2022, 1:43 PM IST