ಬೀದರ್:ಲಾಕ್ ಡೌನ್ ವೇಳೆ ನಿರ್ಲಕ್ಷ್ಯತನದಿಂದ ವ್ಯಕ್ತಿಯೊಬ್ಬನಿಗೆ ಲಾಠಿಯಿಂದ ಗಾಯಗೊಳಿಸಿದ ಹಿನ್ನೆಲೆ ಹುಮನಾಬಾದ್ ಠಾಣೆ ಎಎಸ್ ಐ ಬಸವರಾಜ ಅವರನ್ನು ಸಸ್ಪೆಂಡ್ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರು ಆದೇಶ ಹೊರಡಿಸಿದ್ದಾರೆ.
ಲಾಕ್ಡೌನ್ ನಿಷೇಧಾಜ್ಞೆ ಉಲ್ಲಂಘಿಸಿ ಹುಮನಾಬಾದ್ ಪಟ್ಟಣದ ಬಡಾವಣೆಗಳ ರಸ್ತೆಗಳಲ್ಲಿ ಜನ ಸೇರಿದ್ರು. ಹೀಗಾಗಿ ಎಎಸ್ ಐ ಬಸವರಾಜ ಅವರಿಗೆ ಬುದ್ಧಿ ಕಲಿಸಲು ಬೈಕ್ ನಲ್ಲಿದ್ದ ಲಾಠಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಬೈಕ್ ಸವಾರ ಸಾಸೀರ್ ಮುಖಕ್ಕೆ ಲಾಠಿ ತಗುಲಿದೆ. ನಾಸೀರ್ ಗಂಭೀರ ಗಾಯಗೊಂಡಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕಲ್ಬುರ್ಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಬೀದರ್ ನಲ್ಲಿ ಲಾಠಿ ತಗುಲಿ ವ್ಯಕ್ತಿ ಮುಖಕ್ಕೆ ಗಂಭೀರ ಗಾಯ...ಎಎಸ್ ಐ ಸಸ್ಪೆಂಡ್...!
ಬೀದರ್ನಲ್ಲಿ ಪೊಲೀಸ್ ಸಿಬ್ಬಂದಿಯ ಲಾಠಿ ತಗುಲಿ ಬೈಕ್ ಸವಾರನೊಬ್ಬ ಗಂಭೀರ ಗಾಯಗೊಂಡಿದ್ದಾರೆ .
ಲಾಠಿ ತಗುಲಿ ವ್ಯಕ್ತಿ ಮುಖಕ್ಕೆ ಗಂಭೀರ ಗಾಯ
ಕರ್ತವ್ಯದಲ್ಲಿದ್ದ ಎಎಸ್ ಐ ಬಸವರಾಜ ಬೈಕ್ ಸವಾರ ನಾಸೀರ್ ಮೂಗಿಗೆ ಗಾಯಗೊಳಿಸಿದ್ದು ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿತನ ಎಂದು ಮೇಲ್ನೊಟಕ್ಕೆ ಸಾಬೀತಾಗಿದ್ದು, ಇಲಾಖೆ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೆ ಅಮಾನತುಗೊಳಿಸಿ ಆದೇಶಿಸಿದೆ.